
ಮಂಗಳೂರು ಆಗಸ್ಟ್ 14 :- ಆಗಸ್ಟ್ 15 ರಂದು ಮಂಗಳೂರು ನಗರದ ನೆಹರೂ ಮೈದಾನದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಸಮಯ ಭದ್ರತಾ ದೃಷ್ಟಿಯಿಂದ ನೆಹರೂ ಮೈದಾನದ ಸುತ್ತ ಮುತ್ತ ಕಟ್ಟುನಿಟ್ಟಿನ ಸಂಚಾರ ವ್ಯವಸ್ಥೆ ಬಂದೋಬಸ್ತು ನಿರ್ವಹಿಸ ಬೇಕಾಗಿದ್ದರಿಂದ ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ತನಕ ಹಾಗೂ ವಿರುದ್ದ ದಿಕ್ಕಿನಲ್ಲಿ ಕಾರ್ಯಕ್ರಮಕ್ಕೆ ಸಂಬಂದಿಸಿದ ಇಲಾಖಾ ವಾಹನ ಹೊರತುಪಡಿಸಿ, ಇತರ ವಾಹನಗಳ ಪ್ರವೇಶ ಯಾ ಪಾರ್ಕಿಂಗನ್ನು ಹಾಗೂ ಎ.ಬಿ ಶೆಟ್ಟಿ ವೃತ್ತದಿಂದ ಪುಟ್ಬಾಲ್ ಮೈದಾನದ ತನಕ ಯು.ಪಿ.ಮಲ್ಯ ರಸ್ತೆಯಲ್ಲಿ ಮೈದಾನದ ಬದಿ ಎಲ್ಲಾ ತರನಾದ ವಾಹನಗಳ ನಿಲುಗಡೆಯನ್ನು ನಿಷೇದಿಸಲಾಗಿದೆ.
ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ಹೋಗುವ ವಾಹನಗಳು ನೆಹರೂ ವೃತ್ತ ರೊಸಾರಿಯೋ ಆಗಿ ಸಂಚರಿಸುವುದು. ಅದೇ ರೀತಿ ಹ್ಯಾಮಿಲ್ಟನ್ ವೃತ್ತದಿಂದ ಎ.ಬಿ.ಶೆಟ್ಟಿ ಕಡೆಗೆ ಸಂಚರಿಸುವ ವಾಹನಗಳು ಲೇಡಿಘೋಷನ್ ಕ್ಲಾಕ್ ಟವರ್ ಮೂಲಕ ಸಂಚರಿಸುವುದು.
ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ಸಾರ್ವಜನಿಕರು ತಮ್ಮ ವಾಹನಗಳನ್ನು ಕ್ರಮವಾಗಿ ಗೇಟ್ ವೇ ಹೋಟೆಲ್ ರಸ್ತೆಯ ಎಡಬಾಗದಲ್ಲಿ ಪಾರ್ಕ್ ಮಾಡಬಹುದಾಗಿದೆ. ಶಾಲಾ ವಾಹನಗಳನ್ನು ರೊಸಾರಿಯೋ ರಸ್ತೆಯ ಎಡಭಾಗದಲ್ಲಿ ಪಾರ್ಕ್ ಮಾಡಬಹುದು ಎಂದು ಮಂಗಳೂರು ನಗರ ಪೋಲಿಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Comments are closed.