ಕರಾವಳಿ

ಮೊಬೈಲ್ ಕೊಡಿಸದ್ದಕ್ಕೆ ಬೇಸತ್ತು ಕಾಲೇಜು ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಮನೆಯವರು ಮೊಬೈಲ್ ಕೊಡಿಸಲ್ಲವೆಂದು ಬೇಸತ್ತ ಕಾಲೇಜು ವಿದ್ಯಾರ್ಥಿ ಮನೆಯಲ್ಲಿ ನೇಣಿಗೆ ಕೊರಳೊಡ್ಡಿದ ಘಟನೆ ಕುಂದಾಪುರ ತಾಲೂಕಿನ ಬಿದ್ಕಲಕಟ್ಟೆ ಸಮೀಪದ ಕಕ್ಕುಂಜೆಯಲ್ಲಿ ನಡೆದಿದೆ.

ಬಿದ್ಕಲಕಟ್ಟೆ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪ್ರತೀಕ್ಷ ಕುಲಾ (೧೭) ಆತ್ಮಹತ್ಯೆ ಮಾಡಿಒಂಡ ವಿದ್ಯಾರ್ಥಿ.

ಶುಕ್ರವಾರ ಸಂಜೆ ಕಾಲೇಜಿನಿಂದ ಮರಳಿದ ಬಳಿಕ ಮನೆಯಲ್ಲಿ ನೇಣಿಗೆ ಶರಣಾಗಿದ್ದು ಆತ ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.