ಕರಾವಳಿ

ಬುರ್ಖಾ ಧರಿಸಿ ಪರಾರಿಗೆ ಯತ್ನಿಸುತ್ತಿದ್ದ ರಮ್ಯಾ ಶೆಟ್ಟಿ ಪೊಲೀಸ್ ವಶ

Pinterest LinkedIn Tumblr

ಮಂಗಳೂರು, ಜುಲೈ. 24: ಶಿರೂರು ಮಠದ ಲಕ್ಷ್ಮೀವರ ತೀರ್ಥ ಶ್ರೀಗಳ ನಿಗೂಢ ಸಾವು ಪ್ರಕರಣದಲ್ಲಿ ವಿಚಾರಣೆಗಾಗಿ ಪೊಲೀಸರಿಗೆ ಬೇಕಾಗಿದ್ದ ಶಿರೂರು ಸ್ವಾಮಿಗಳ ಆಪ್ತೆ ಎನ್ನಲಾದ ರಮ್ಯಾ ಶೆಟ್ಟಿ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಶಿರೂರು ಸ್ವಾಮಿಗಳ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹುಡುಗಾಟದಲ್ಲಿ ತೊಡಗಿದ್ದಾಗ ಪರಾರಿಯಾಗಲು ಯತ್ನಿಸುತ್ತಿದ್ದ ರಮ್ಯಾ ಶೆಟ್ಟಿಯನ್ನು ನಿನ್ನೆ ರಾತ್ರಿ ಅಳದಂಗಡಿ ಬಳಿ ವೇಣೂರು ಪೊಲೀಸರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಸೋಮವಾರ ರಾತ್ರಿ ಅಳದಂಗಡಿ ಬಳಿ ಟೈರ್ ಪಂಕ್ಚರ್ ಆಗಿ ಗ್ಯಾರೇಜ್ ಬಳಿ ನಿಂತಿದ್ದ ಕಾರನ್ನು ವೇಣೂರು ಪೊಲೀಸರು ಪರಿಶೀಲನೆ ನಡೆಸಿದಾಗ ಮೂವರು ಮಹಿಳೆಯರೊಂದಿಗೆ ಬುರ್ಖಾ ಧರಿಸಿ ಪ್ರಯಾಣಿಸುತ್ತಿದ್ದ ರಮ್ಯಾ ಶೆಟ್ಟಿ ಪತ್ತೆಯಾದರು. ರಮ್ಯಾ ಶೆಟ್ಟಿ ಸೇರಿದಂತೆ ನಾಲ್ವರು ಮಹಿಳೆಯರು, ಕಾರು ಚಾಲಕ ಮತ್ತು ಅವರು ಪ್ರಯಾಣಿಸುತ್ತಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ವೇಣೂರು ಪೊಲೀಸರು ರಮ್ಯಾ ಶೆಟ್ಟಿಯನ್ನು ತನಿಖೆಗಾಗಿ ಉಡುಪಿ ಪೊಲೀಸರ ವಶಕ್ಕೆ ಒಪ್ಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.