ಕರಾವಳಿ

ಉಬ್ಬಿರುವ ರಕ್ತನಾಳಗಳ ಸಮಸ್ಯೆ ನಿವಾರಣೆಗೆ ಈ ಸಲಹೆಗಳು…

Pinterest LinkedIn Tumblr

ಪ್ರತಿಯೋಬ್ಬರಿಗು ಯಾವಾಗಲಾದರು ಒಂದು ಸಲ, ಕಾಲು, ಕಾಲಿನ ಬೆರಳು ಅಥವಾ ಕೈಬೆರಳುಗಳು ಶೀತ ದಿಂದ ಜಮೆಯಾಗುವುದು ಅಥವಾ ಜೋಮು ಹಿಡಿಯುವುದು ಸಹಜ ಇದು ಆ ಭಾಗದಲ್ಲಿ ಸರಿಯಾದ ರಕ್ತ ಸಂಚಾರವಾಗುತ್ತಿಲ್ಲ ಎಂಬುದರ ಸೂಚನೆ, ಇದರಿಂದ ನಿಮಗೆ ಕಿಡ್ನಿ ಅಥವಾ ಉಬ್ಬಿರುವ ರಕ್ತನಾಳಗಳ ಸಮಸ್ಯೆ ಬರುತ್ತದೆ.

ಅದಕ್ಕಾಗಿ ನಾವು ತಿಳಿಸುವ ಕೇವಲ ಈ 7 ಸಲಹೆಗಳನ್ನು ಪಾಲಿಸಿ ಹಾಗು ಆರೋಗ್ಯಕರ ಜೀವನ ನಿಮ್ಮದಾಗಿಸಿಕೊಳ್ಳಿ.

1. ಮಸಾಜ್ :
ಮಸಾಜ್ ಮಾಡಿಸಿಕೊಳ್ಳುವುದರಿಂದ ಮೃದು ಅಂಗಾಂಶಗಳಲ್ಲಿ ಸುಗಮ ರಕ್ತ ಸಂಚಾರವಾಗುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಮಸಾಜ್, ನಿಮ್ಮ ಬಾಹ್ಯ ನಾಳೀಯ ಕಾರ್ಯದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಸ್ಥಿರವಾದ ಆದರೆ ಶಾಂತ ಮಸಾಜ್ ಹೃದಯದ ಕಡೆಗೆ ಗುರಿ ಮಾಡಿ ಮಾಡಬೇಕು ಇದರಿಂದ ದುಗ್ಧರಸ ಮತ್ತು ರಕ್ತನಾಳದ ಹರಿವು ಸರಾಗವಾಗುತ್ತದೆ. ಮಸಾಜ್-ಗಾಗಿ ಬಾದಾಮಿ, ತೆಂಗಿನಕಾಯಿ, ಅಥವಾ ಆಲಿವ್ ತೈಲಗಳನ್ನು ಬಳಸಿ. ಸ್ವಯಂ ಮಸಾಜ್-ಗಾಗಿ ನೀವು ಫೋಮ್ ರೋಲರ್ ಅನ್ನು ಬಳಸಬಹುದು, ಅದನ್ನು ನೆಲದ ಮೇಲೆ ಇರಿಸಿ, ಅದರ ವಿರುದ್ಧ ನೋಯುತ್ತಿರುವ ಸ್ನಾಯು ಒತ್ತಿ, ಮತ್ತು ಉರುಳಿ. ನಿಮಗೆ ಸಾಧ್ಯವಾದರೆ, ವಾರದಲ್ಲಿ ಒಂದು ಬಾರಿ ಮಸಾಜ್ ಮಾಡಿಕೊಳ್ಳಿ.

2. ನಿಮ್ಮ ಅಡಿ ಎತ್ತರಿಸಿ :
ಕಾಲುಗಳನ್ನು ಹೃದಯದಕ್ಕಿಂತ ಎತ್ತರವಾಗಿ ಇಡುವುದರಿಂದ ನಿಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತದೆ, ಏಕೆಂದರೆ ಹೀಗೆ ಮಾಡಲು ನಿಮ್ಮ ದೇಹ, ರಕ್ತನಾಳಗಳು ಮತ್ತು ಕಾಲುಗಳ ಒತ್ತಡವನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಕಾಲ್ಬೆರಳುಗಳನ್ನು ಸರಿಸಿ, ಮತ್ತು ನಿಮ್ಮ ಎತ್ತರದ ಪಾದಗಳನ್ನು ವೃತ್ತಾಕಾರದಲ್ಲಿ ತಿರುಗಿಸಿ. ಹೀಗೆ ನಿತ್ಯ ೨೦ ನಿಮಿಷ ಮಾಡುವುದರಿಂದ ರಕ್ತ ಸಂಚಾರ ಸರಾಗವಾಗುತ್ತದೆ.

3. ಫೋಲಿಕ್ ಆಮ್ಲ ಸಮೃದ್ಧವಾದ ಆಹಾರ ಸೇವಿಸಿ :
ಫೋಲಿಕ್ ಆಮ್ಲ ಸಮೃದ್ಧವಾದ ಆಹಾರ ಸೇವಿಸುವುದರಿಂದ ಸೆಲ್ಯುಲಾರ್ ಬೆಳವಣಿಗೆ ಮತ್ತು ಪುನರುತ್ಪಾದನೆ ಆಗುತ್ತದೆ. ಫೋಲಿಕ್ ಆಮ್ಲ ಕೆಂಪು ರಕ್ತ ಕಣಗಳನ್ನು ಉತ್ಪತ್ತಿ ಮಾಡುವ ಮತ್ತು ಅನಿಮಿಯಾ ರೋಗವನ್ನು ತಡೆಯುವ ಕೆಲಸ ಮಾಡುತ್ತದೆ.

ಫೋಲಿಕ್ ಆಮ್ಲ ದೊರೆಯುವ ಮೂಲಗಳು : ಹಸಿರು ಎಲೆ ತರಕಾರಿಗಳು ಉದಾ : ಪಾಲಕ್ ಸೊಪ್ಪು, ಗೆಡ್ಡೆ ಕೋಸು. ಕೋಸು ಗಡ್ಡೆ ಮತ್ತು ಆವಕಾಡೊ ಹಣ್ಣು. ಸಿಟ್ರಸ್ ಹಣ್ಣುಗಳು ಉದಾ : ಸಂತ್ರ, ಮೋಸಂಬಿ.
ಪಪ್ಪಾಯ ಅಥವಾ ಫರಂಗಿ ಹಣ್ಣು, ಬಾಳೆಹಣ್ಣು, ಮತ್ತು ಸ್ಟ್ರಾಬೆರ್ರಿ ಹಣ್ಣುಗಳು. ಬೀನ್ಸ್, ಅವರೆಕಾಳು ಮತ್ತು ಮಸೂರಗಳು. ಬೀಜಗಳು ಉದಾ : ಸೂರ್ಯಕಾಂತಿ ಬೀಜಗಳು, ಬಾದಾಮಿ ಮತ್ತು ವಾಲ್-ನಟ್. ಕೆಂಪು ಗಡ್ಡೆ, ಮೆಕ್ಕೆ-ಜೋಳ ಮತ್ತು ಗೆಜ್ಜರಿ.

4. ಸರಿಯಾದ ಉಡುಪುಗಳನ್ನು ಧರಿಸಿರಿ :
ತುಂಬಾ ಬಿಗಿಯಾದ ಉಡುಪುಗಳು ಧರಿಸುವುದರಿಂದ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುತ್ತದೆ. ಅದಕ್ಕಾಗಿ ನಿಮ್ಮ ಇಷ್ಟದ ಸ್ಕಿನ್ನ್ಯ್ ಜೀನ್ಸ್, ಮತ್ತು ಟೈಟ್ ಪ್ಯಾಂಟ್ಗಳಿಗೆ ಗುಡ್ ಬೈ ಹೇಳಿ ಸ್ವಲ್ಪ ಸಡಿಲಾದ ಬಟ್ಟೆಯನ್ನು ಧರಿಸಿರಿ.

5. ಮೆಣಸಿನ ಪುಡಿಯುಕ್ತ ಆಹಾರವನ್ನು ಸೇವಿಸಿ :
ಮೆಣಸಿನ ಪುಡಿ ಮತ್ತು ಕೆಂಪು ಮೆಣಸಿನಕಾಯಿ ಸೇವಿಸುವುದರಿಂದ ರಕ್ತನಾಳಗಳನ್ನು ವಿಸ್ತರಿಸಿ, ರಕ್ತ ಸಂಚಾರ ಸರಾಗವಾಗುತ್ತದೆ. ಇವನ್ನು ತಿನ್ನುವುದರಿಂದ ಹೃದಯರಕ್ತನಾಳದ ವ್ಯವಸ್ಥೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ, ರಕ್ತದೊತ್ತಡ ಸಾಮಾನ್ಯವಾಗಿಡುತ್ತದೆ ಹಾಗು ನಿಮ್ಮ ಕೈ ಮತ್ತು ಪಾದಗಳನ್ನು ಬೆಚ್ಚಗಾಗಿಸಲು ಸಹಾಯ ಮಾಡುತ್ತದೆ.

6. ಬಿಯರ್ ಬದಲು ವೈನ್ ಆಯ್ಕೆ ಮಾಡಿಕೊಳ್ಳಿ :
ಒಂದು ವೇಳೆ ನೀವು ಮದ್ಯವ್ಯಸನಿಗಳಾಗಿದ್ದರೆ ನೀವು ಬಿಯರ್ ಬದಲಾಗಿ ವೈನ್ ಬಳಸಿ, ಅಧ್ಯಯನದ ಪ್ರಕಾರ ವೈನ್-ನಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಸಸ್ಯ ಸಂಯುಕ್ತಗಳು ಇರುತ್ತವಂತೆ. ಆದರೆ ಅತಿಯಾದ್ರೆ ಅಮೃತಾನು ವಿಷವಾಗುತ್ತೆ, ಮಹಿಳೆಯರು ದಿನಕ್ಕೆ ೧ ಬಾರಿ ಮತ್ತು ಪುರುಷರು ಗರಿಷ್ಠ ೨ ಬಾರಿ ಸೇವಿಸಬಹುದು.

7. ಸಾಕು ಪ್ರಾಣಿಗಳು :
ನಿಮ್ಮ ಸಾಕು ಪ್ರಾಣಿಗಳ ಜೊತೆ ವಿಶೇಷ ಬಂಧವು ನಿಮ್ಮ ಹೃದಯದ ಬಡಿತವನ್ನು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಅದರಲ್ಲಿ ವಿಶೇಷವಾಗಿ ನಾಯಿಯೊಂದು ಮನೆಯಲ್ಲಿದ್ದರೆ ನೀವು ಸದಾ ಒತ್ತಡ ಮುಕ್ತವಾಗಿ, ಚಟುವಟಿಕೆಯಿಂದ ಇರಿರುತ್ತೀರಿ.

Comments are closed.