ಕರಾವಳಿ

ಮಟಮಟ ಮಧ್ಯಾಹ್ನವೇ ಮನೆಗೆ ನುಗ್ತಾನೆ, ಒಳ ಉಡುಪು ಕದಿತಾನೆ; ಕುಂದಾಪುರದ ವಂಡ್ಸೆಯಲ್ಲಿ ಸೈಕೋ ಕಾಟ!

Pinterest LinkedIn Tumblr

ಕುಂದಾಪುರ: ಮಧ್ಯಾಹ್ನ ಆಯ್ತು ಅಂದರೆ ಈ ಭಾಗದಜನ ಆತಂಕದ ಜೊತೆ ಎಚ್ಚರದಿಂದಿರಬೇಕಾಗಿದೆ. ಮನೆಯ ಹೊರಗೆ, ಒಳಗಿರುವ ಒಳ ಉಡುಪುಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಿದೆ. ಕುಂದಾಪುರ ತಾಲೂಕಿನ ಕೊಲ್ಲೂರು ಪೊಲೀಸ್ ಠಾಣೆ ವ್ಯಾಪ್ತಿಯ ವಂಡ್ಸೆಯಲ್ಲಿ ಸೈಕೋ ಕಾಟ ಮಿತಿಮೀರಿದೆ.

(ಸಾಂದರ್ಭಿಕ ಚಿತ್ರ)

ಕಳೆದ ಒಂದೂವರೆ ತಿಂಗಳುಗಳಿಂದ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರು ಕಡೆಗಳಲ್ಲಿ ಇಂತಹದೊಂದು ಪ್ರಕರಣ ನಡೆಯುತ್ತಿದೆ. ಹಾಡಹಗಲೇ ಈ ಕೃತ್ಯ ನಡೆಸುವ ವಿಕೃತಕಾಮಿ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಮನೆಯ ಹೆಂಚು ತೆಗೆದು ಕವಾಟಿನಲ್ಲಿರುವ ಬಟ್ಟೆ, ಒಳ ಉಡುಪುಗಳನ್ನು ಕದ್ದೊಯ್ಯುತ್ತಿದ್ದಾನೆ. ದಿನೇ ದಿನೇ ಈ ವಿಕೃತ ಕಾಮಿಯ ಹಾವಳಿ ಹೆಚ್ಚಾಗಿದ್ದರಿಂದ ಕೊನೆಗೆ ಜನರು ಪಂಚಾಯತ್ ಜನಪ್ರತಿನಿಧಿಗಳಿಗೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ಅಷ್ಟಕ್ಕೂ ಒಳ ಉಡುಪುಗಳನ್ನು ಕದಿಯುತ್ತಿ್ರುವ ಸೈಕೋ ಪಾತ್ ಯಾರು ಎನ್ನುವುದು ಇನ್ನೂ ಕೂಡ ನಿಗೂಢವಾಗಿಯೇ ಉಳಿದಿದೆ. ಯಾರೂ ಇಲ್ಲದ ಮನೆಯನ್ನು ಟಾರ್ಗೇಟ್ ಮಾಡುವ ಈತ ಮಧ್ಯಾಹ್ನದ ವೇಳೆಗೆ ನುಗ್ಗಿ ಕವಾಟಿನಲ್ಲಿರುವ ವಸ್ತೃಗಳನ್ನು ಚೆಲ್ಲಾಪಿಲ್ಲಿಯಾಗಿಸಿ, ತನಗೆ ಬೇಕಾದ ಉಡುಪು ಕದ್ದು ಬಳಿಕ ಅಲ್ಲಿಂದ ಕಾಲ್ಕೀಳುತ್ತಾನೆ.

ಮಧ್ಯಾಹ್ನ 11 ರಿಂದ 2 ಗಂಟೆಯೊಳಗೆ ಕಳವು ಪ್ರಕರಣ ನಡೆಯುತ್ತಿದ್ದು, ಈ ಕಳವು ಕೃತ್ಯ ಒಬ್ಬನೆ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ಮನೆಯೊಂದರಲ್ಲಿ ಇಪ್ಪತ್ತು ಸಾವಿರ ರೂ. ಕಳವುಗೈದಿರುವ ಬಗ್ಗೆಯೂ ದೂರಲಾಗಿದೆ.

ತಕ್ಷಣ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈತ ಯಾರೆಂಬುದನ್ನು ಪತ್ತೆಹಚ್ಚಬೇಕಿದೆ.

Comments are closed.