ಕರಾವಳಿ

ಮೀನಿಗೆ ರಾಸಾಯನಿಕ ಬಳಕೆ ಶಂಕೆ; ಮುದೂರಿನಲ್ಲಿ ಮೀನಿನಿಂದ ಸೋರಿದ ಕೆಂಬಣ್ಣದ ದ್ರಾವಣ!

Pinterest LinkedIn Tumblr

ಕುಂದಾಪುರ: ತಾಲೂಕಿನ ಕೊಲ್ಲೂರು ಸಮೀಪದ ಮುದೂರಿನಲ್ಲಿ ಮಾರಾಟಕ್ಕೆ ತಂದ ಮೀನಿನಲ್ಲಿ ಕೆಂಪು ಬಣ್ಣದ ದ್ರಾವಣ ಸೋರಲಾರಂಭಿಸಿದ್ದು, ರಾಸಾಯನಿಕ ಬೆರೆಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಕುಂದಾಪುರ ಸಂಗಮ್ ಬಳಿಯಲ್ಲಿರುವ ರಖಂ ಮೀನು ಮಾರಾಟ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಚಿಲ್ಲರೆ ಮೀನು ಮಾರಾಟಗಾರರಾದ ಮೂವರು ಮಹಿಳೆಯರು ಮೀನು ಖರೀದಿ ಮಾಡಿ ತಂದಿದ್ದರು. ಅವರು ಮುದೂರು ಮಾರ್ಕೆಟ್ ತಲುಪುತ್ತಿದ್ದಂತೆ ಮೀನಿನ ಹೊಟ್ಟೆಯಿಂದ ಕೆಂಪು ಬಣ್ಣದ ದ್ರಾವಣ ಸುರಿಯಲಾರಂಭಿಸಿತ್ತು. ಇದನ್ನು ಗಮನಿಸಿದ ಗ್ರಾಹಕರು ಮೀನು ಖರೀದಿಗೆ ಹಿಂದೇಟು ಹಾಕಿದ್ದಾರೆ. ಇದರಿಂದ ಸುಮಾರು 50 ಕೆ.ಜಿ ಮೀನು ವ್ಯರ್ಥವಾಗಿದೆ ಎಂದು ಸ್ಥಳೀಯರಾದ ವಾಸುದೇವ ಮುದೂರು ದೂರಿದ್ದಾರೆ.

ರಖಂ ಮೀನು ಮಾರಾಟ ಕೇಂದ್ರಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ತನಿಖೆಯಿಂದ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

Comments are closed.