ಕರಾವಳಿ

ಮೂರು ಜಿಲ್ಲೆಯ ಮುಖ್ಯಮಂತ್ರಿ ಕುಮಾರಸ್ವಾಮಿಗೆ ದಿಕ್ಕಾರ: ಉಡುಪಿಯಲ್ಲಿ ಮೀನುಗಾರ ಮಹಿಳೆಯರ ಪ್ರತಿಭಟನೆ

Pinterest LinkedIn Tumblr

ಉಡುಪಿ: ಹಲವು ಬೇಡಿಕೆಗಳನ್ನು ಆಗ್ರಹಿಸಿ ಹಸಿ ಮೀನು ಮಾರಾಟ ಸಂಘ ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ತೀವ್ರ ಆಕ್ರೋಷ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಉಡುಪಿಯ ಪಿಪಿಸಿ ರೋಡಿನಲ್ಲಿರುವ ಮೀನು ಮಾರುಕಟ್ಟೆಯಲ್ಲಿ ಸಾಲಮನ್ನಾ ಹಾಗೂ ಬಡ್ಡಿರಹಿತ ಸಾಲ ನೀಡುವಂತೆ ಒತ್ತಾಯಿಸಿ ಮೀನುಗಾರರು ಪ್ರತಿಭಟನೆ ನಡೆಸಿದ್ರು. ಸರಕಾರ ಬಜೆಟ್ ಘೋಷಣೆಯಲ್ಲಿ ಕರವಾಳಿಯನ್ನು ಹಾಗೂ ಕರವಾಳಿಯ ಮೀನುಗಾರರನ್ನು ಕಡೆಗಣಿಸಿದೆ. ರೈತರ ಸಾಲವನ್ನು ಮನ್ನಾ ಮಾಡಿದಂತೆ ಮೀನುಗಾರರ ಮಹಿಳೆಯರ ಸಾಲವನ್ನು ಸರಕಾರ ಮನ್ನಾ ಮಾಡಬೇಕು.

ಇದರೊಂದಿಗೆ ಸಬ್ಸಿಡಿಯಲ್ಲಿ ಮೀನುಗಾರರಿಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಮೀನುಗಾರರು ಸರಕಾರವನ್ನು ಒತ್ತಾಯಿಸಿದರು.

Comments are closed.