ಕರಾವಳಿ

ಕದ್ರಿ ಜಿ.ಎಸ್.ಬಿ ಕಾಲನಿ ರಸ್ತೆ ಒಳಚರಂಡಿ ಕಾಮಗಾರಿ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಲು ಶಾಸಕ ವೇದವ್ಯಾಸ ಕಾಮಾತ್‌ ಸೂಚನೆ

Pinterest LinkedIn Tumblr

ಮಂಗಳೂರು : ನಗರದ ಕದ್ರಿಯಲ್ಲಿರುವ ಜಿ.ಎಸ್.ಬಿ ಕಾಲನಿ ರಸ್ತೆ ಒಳಚರಂಡಿ ಕಾಮಗಾರಿಗೋಸ್ಕರ ಅಗೆಯಲಾಗಿದ್ದು ಕಾಮಗಾರಿ ಮುಗಿದ ಬಳಿಕ ಕಳೆದ ಕೆಲವು ತಿಂಗಳಿನಿಂದ ಸಂಪೂರ್ಣ ಹದೆಗೆಟ್ಟಿದೆ.ವಾಹನ ಸಂಚಾರ ಸಂಪೂರ್ಣ ಇದರಿಂದ ಸ್ಥಗಿತಗೊಂಡಿದೆ.ಕದ್ರಿ ಕಂಬಳ ರಸ್ತೆಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು ಇದರಿಂದ ಸ್ಥಳೀಯರು, ಶಾಲಾಮಕ್ಕಳು,ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.

ಮಹಾನಗರ ಪಾಲಿಕೆ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಶಾಸಕರ ಗಮನಕ್ಕೆ ತಂದಿದ್ದು ಶನಿವಾರ ಸಂಜೆ ಶಾಸಕ ವೇದವ್ಯಾಸ ಕಾಮತ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರಲ್ಲದೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಇದೇ ಬರುವ ಸೋಮವಾರ ದಿಂದ ಕೆಲಸ ತ್ವರಿತ ಗತಿಯಲ್ಲಿ ಮಾಡಿಸುವ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ತಾಕೀತು ಮಾಡಿದರು.ಮಳೆಗಾಲ ಮುಗಿದ ಕೂಡಲೇ ಈ ರಸ್ತೆ ಕಾಂಕ್ರೀಟಿಕರಣಗೊಳ್ಳಲಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸ್ಥಳೀಯರಾದ ಅಭಿಲಾಶ ಸಾಲಿಯಾನ್,ಸಲ್ಮಾ ಡಿ ಸೋಜಾ,ಗಿರಿಧರ ಪ್ರಭು,ವೀಕೆಂಡ್ ಕ್ರಿಕೆಟ್ ತಂಡದ ಸದಸ್ಯರು,ಬಿಜೆಪಿ ಪ್ರಮುಖರಾದ ವಸಂತ ಜೆ ಪೂಜಾರಿ,ಶ್ರೀಕಾಂತ್,ಫೆಡ್ರಿಕ್ ಡಿಸೋಜಾ ಹಾಗೂ ಇತರ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Comments are closed.