ಕರಾವಳಿ

ಮದುವೆ ಮನೆಗೆ ಬೆಂಕಿಯಿಟ್ಟ ಅಪರಾಧಿಗಳಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ದಂಡ

Pinterest LinkedIn Tumblr

ಕುಂದಾಪುರ: ಜಾಗದ ತಕರಾರಿನ ಹಿನ್ನೆಲೆ ಪೂರ್ವದ್ವೇಷದಿಂದ ತನ್ನದೇ ಸಂಬಂಧಿಗಳಾದವರ ಮದುವೆ ಮನೆಗೆ ಬೆಂಕಿ ಹಚ್ಚಿ ಹಾನಿಗೊಳಿಸಿದ ಇಬ್ಬರ ಆರೋಪ ಸಾಭೀತಾಗಿದ್ದು ಅಪರಾಧಿಗಳಿಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಾಯಿತು.

2015 ರ ಎಪ್ರಿಲ್ 22 ರಂದು ಬೈಂದೂರು ತಾಲೂಕಿನ ತಗ್ಗರ್ಸೆ ಅರಳಿಕಟ್ಟೆಯ ಕುಶಲ ಶೆಟ್ಟಿಯವರ ಮನೆಗೆ ಬೆಂಕಿ ಹಚ್ಚಿದ್ದ ಅಪರಾಧಿಗಳಾದ ರಾಜೇಂದ್ರ ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು 50 ಸಾವಿರ ದಂಡ ವಿಧಿಸಿದ್ದು ಮನೆಗೆ ಅಕ್ರಮ ಪ್ರವೇಶ ಹಾಗೂ ಸೊತ್ತು ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷ ಸಜೆ, 10 ಸಾವಿರ ದಂಡ ವಿಧಿಸಿದೆ.

ಕುಂದಾಪುರಲ್ಲಿನ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ್ ಖಂಡೇರಿ ಈ ಮಹತ್ವದ ತೀರ್ಪು ಪ್ರಕಟಿಸಿದ್ದು ದಂಡದ ಮೊತ್ತದಲ್ಲಿ 45 ಸಾವಿರ ರೂಪಾಯಿ ಮೊತ್ತ ದೂರುದಾರರಿಗೆ ನೀಡುವಂತೆ ಆದೇಶವನ್ನು ನೀಡಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

ಇದನ್ನೂ ಓದಿರಿ: ಮದುವೆ ಮನೆಗೆ ಬೆಂಕಿಯಿಟ್ಟ ದುರುಳ ಸೋದರರು| ಇದಕ್ಕೆ ಹಿರಿಯನೊಬ್ಬನ ಕುಮ್ಮಕ್ಕು| ಸ್ವಂತ ಚಿಕ್ಕಮ್ಮನ ಮನೆಗೇ ಬೆಂಕಿಯಿಟ್ಟು, ಮನೆ ವಸ್ತುಗಳ ಧ್ವಂಸ | ಮೂವರು ಅರೆಸ್ಟ್

                       ಬೈಂದೂರು: ಮದುವೆ ಮನೆಗೆ ಬೆಂಕಿಯಿಟ್ಟ ದುಷ್ಟರ ಅಪರಾಧ ಸಾಭೀತು; ಜುಲೈ 7ಕ್ಕೆ ಶಿಕ್ಷೆ ಪ್ರಕಟ

(ವರದಿ- ಯೋಗೀಶ್ ಕುಂಭಾಸಿ)

Comments are closed.