ಕರಾವಳಿ

ಬೆಳಗಾಂನ ಹೆಸರಾಂತ “ಅಜಂತಾ ಕೆಫೆ” ಹೋಟೆಲ್‌ನ 3ನೇ ಶಾಖೆ ಮಂಗಳೂರಿನಲ್ಲಿ ಶುಭಾರಂಭ

Pinterest LinkedIn Tumblr

ಮಂಗಳೂರು, ಜೂನ್.16: ಹೋಟೆಲ್ ಉದ್ಯಮದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಬೆಳಗಾಂನ ಹೆಸರಾಂತ “ಅಜಂತಾ ಕೆಫೆ” ಹೋಟೆಲ್‌ನ ಮೂರನೇ ಶಾಖೆ ಮಂಗಳೂರಿನಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

ನಗರದ ಮಣ್ಣಗುಡ್ಡ – ಗಾಂಧೀನಗರದ ನಾಲ್ಕನೇ ಆಡ್ಡ ರಸ್ತೆಯಲ್ಲಿ ( ರೋಟರಿ ಬಾಲಭವನದ ಹಿಂಬದಿ) ಅತ್ಯಂತ ನವನವೀನ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಶುದ್ಧ ಸಸ್ಯಹಾರಿ ಹೋಟೆಲ್ “ಅಜಂತಾ ಕೆಫೆ”ಯನ್ನು ಶುಕ್ರವಾರ ಬೆಳಿಗ್ಗೆ ಬೆಳಗಾಂನ “ಅಜಂತಾ ಕೆಫೆ”ಯ ಸಂಸ್ಥಾಪಕರಾದ ಶ್ರೀ ಆರ್.ಪಿ.ಶೇರಿಗಾರ್ ಅವರು ದೀಪ ಬೆಳಗಿಸುವ ಮೂಲಕ ವಿಧ್ಯುಕ್ತವಾಗಿ ಉದ್ಘಾಟಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕರಾದ ಶ್ರೀ ವೆಂಕಟರಮಣ ಅಸ್ರಣ್ಣರು ಅಶೀರ್ವಚಿಸಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮಾತ್, ಉಡುಪಿ ಜನರಲ್ ಕ್ರಾಫ್ಟರ್ಸ್‌ನ ಮಾಲಕ ಗಣೇಶ್ ರಾವ್, ಡಾ.ಕೆ.ವಿ ದೇವಾಡಿಗ ಮುಖ್ಯ ಅಥಿತಿಗಳಾಗಿದ್ದರು.

ಮೂಡ ಅಧ್ಯಕ್ಷ ಸುರೇಶ್ ಬಲ್ಲಾಳ್, ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಜಯಂತಿ ಆಚಾರ್, ನಗರದ ಖ್ಯಾತ ಉದ್ಯಮಿಗಳಾದ ಎ.ಜೆ ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ.ಶೆಟ್ಟಿ, ಹೋಟೆಲ್ ಫುಡ್ ಲ್ಯಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಮಾಲಕ ಗಣೇಶ್ ಶೆಟ್ಟಿ, ಎಸ್.ಕೆ.ಎಸ್‌ ಸಮೂಹ ಸಂಸ್ಥೆಯ ಸನತ್ ಕುಮಾರ್ ಶೆಟ್ಟಿ, ಕದ್ರಿ ಡಿಂಕಿ ಡೈನ್ ಮಾಲಕ ಸ್ವರ್ಣ ಸುಂದರ್, ಲಿಕ್ವಿಡ್ ಲಾಂಚ್‌ನ ಸುಧೀರ್ ಹಾಗೂ ಸಹೋದರರು, ಎಮ್.ಎಸ್.ಪೈ ಸಂಸ್ಥೆಯ ಮಾಲಕ ಪದ್ಮನಾಭ ಪೈ, ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ ಹಾಗೂ ಕುಟುಂಬ, ಅಟ್ಲಾಸ್‌ನ ಲೋಹಿತಾಕ್ಷ ಕದ್ರಿ, ಉದ್ಯಮಿ ದಿನೇಶ್ ದೇವಾಡಿಗ, ಕೆ.ಜೆ.ದೇವಾಡಿಗ, ವಾಮನ್ ಮರೋಳಿ, ಶ್ರೀಮತಿ ವೇಣಿ ಮರೋಳಿ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಸಂಸ್ಥೆಗೆ ಶುಭಾ ಹಾರೈಸಿದರು. ದುಬಾಯಿ ಹಾಗೂ ಮುಂಬಾಯಿಯ ಹಿತೈಶಿಗಳು ಕಾರ್ಯಕ್ರಮಕ್ಕೆ ಆಗಮಿಸಿ ಶುಭಾಕೋರಿದರು.

ಆರ್.ಪಿ ಶೇರಿಗಾರ್ ಅವರ ಮಕ್ಕಳಾದ ಬೆಳಗಾಂನ ಉದ್ಯಮಿಗಳು ದಿನೇಶ್ ಶೇರಿಗಾರ್ ಮತ್ತು ಶ್ರೀಮತಿ ಸಂದ್ಯಾ ಶೇರಿಗಾರ್, ಮಕ್ಕಳಾದ ಅವನೀಶ್ ಹಾಗೂ ಅನ್ಸುಲ್, ಅಜಿತ್ ಶೇರಿಗಾರ್ ಹಾಗೂ ಶ್ರೀಮತಿ ಉರ್ಮಿ ಶೇರಿಗಾರ್, ಮಕ್ಕಳಾದ ವೇದಾಂತ್, ಕೌಶಲ್, ಯತೀನ್ ಶೇರಿಗಾರ್ ಹಾಗೂ ಡಾ.ಭಾವನ ಶೇರಿಗಾರ್, ಮಕ್ಕಳಾದ ಪ್ರಣಮ್ ಹಾಗೂ ಪ್ರಥಮ್ ಹಾಗೂ ಮಂಗಳೂರಿನ ಅವಿನಾಶ್ ಮೊಸೈಕ್ ಸಂಸ್ಥೆಯ ಮಾಲಕರಾದ ಪ್ರಕಾಶ್ ಶೇರಿಗಾರ್ ಹಾಗೂ ಶ್ರೀಮತಿ ಜ್ಯೋತಿ ಶೇರಿಗಾರ್, ದಿನೇಶ್ ಶೇರಿಗಾರ್ ಹಾಗೂ ಶ್ರೀಮತಿ ವಿದ್ಯಾ ಶೇರಿಗಾರ್ ಹಾಗೂ ಅವರ ಸಹೋದರರು, ಸಹೋದರಿಯರು ಮತ್ತು ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ದುಬೈಯ ಖ್ಯಾತ ಉದ್ಯಮಿ, ಚಲನ ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಶರ್ಮಿಳಾ ಶೇರಿಗಾರ್ ಅವರು ದುಬೈಯಿಂದಲೇ ನೂತನ ಹೋಟೆಲ್ ಉದ್ಯಮಕ್ಕೆ ಶುಭಾ ಕೋರಿದ್ದಾರೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಹೋಟೆಲ್ ಮಾಲಕರಾದ ಅಕ್ಷಯ ಶೇರಿಗಾರ್ ಹಾಗೂ ಶಮಂತ್ ಶೇರಿಗಾರ್ ಅಥಿತಿಗಳನ್ನು ಸ್ವಾಗತಿಸಿದರು. ಶ್ರೀನಿವಾಸ್ ಶೇರಿಗಾರ್ ಹಾಗೂ ಶ್ರೀಮತಿ ಆಶಾ ಶೇರಿಗಾರ್ ಉಪಸ್ಥಿತರಿದ್ದರು.

ಅಧುನಿಕ ಶೈಲಿಯ ಅಡುಗೆ ಕೋಣೆ : ವೈವಿಧ್ಯಮಯ ತಿಂಡಿ ತಿನಿಸುಗಳು

“ಅಜಂತಾ ಕೆಫೆ” ಶುದ್ಧ ಸಸ್ಯಹಾರಿ ಹೋಟೆಲ್ ಬೆಳಗಾಂನಲ್ಲಿ 1963ರಲ್ಲಿ ಪ್ರಾರಂಭಗೊಂಡಿತ್ತು. 2004ರಲ್ಲಿ ಬೆಳಗಾಂನಲ್ಲಿ “ಅಜಂತಾ ಕೆಫೆ”ಯ ಎರಡನೇ ಶಾಖೆ ಉದ್ಘಾಟನೆಗೊಂಡಿತ್ತು.

ಇದೀಗ ನಗರದ ಉದ್ಯಮಿ ಶ್ರೀನಿವಾಸ್ ಶೇರಿಗಾರ್ ಹಾಗೂ ಶ್ರೀಮತಿ ಆಶಾ ಶೇರಿಗಾರ್ ದಂಪತಿಗಳ ಮಕ್ಕಳಾದ ಅಕ್ಷಯ ಶೇರಿಗಾರ್ ಹಾಗೂ ಶಮಂತ್ ಶೇರಿಗಾರ್ ಮಾಲಕತ್ವದಲ್ಲಿ ಮಂಗಳೂರಿನಲ್ಲಿ “ಅಜಂತಾ ಕೆಫೆ”ಯ ಮೂರನೇ ಶಾಖೆ ಶುಭಾರಂಭಗೊಂಡಿದೆ.

ವಿಶೇಷ ವಿನ್ಯಾಸದೊಂದಿಗೆ ಅತ್ಯಂತ ಅಧುನಿಕ ಶೈಲಿಯ ಅಡುಗೆ ಕೋಣೆಯನ್ನು ಹೊಂದಿರುವ ನೂತನ ಹೋಟೆಲ್‌ನಲ್ಲಿ ಸೌತ್ ಇಂಡಿಯನ್, ನಾರ್ತ್ ಇಂಡಿಯನ್, ಚೈನಿಸ್ ಹಾಗೂ ತಂದೂರಿ ಸೇರಿದಂತೆ ಹಲವಾರು ಬಗೆಯ ವಿಶೇಷ ಖಾದ್ಯಗಳು ಲಭ್ಯವಿದ್ದು, ಗ್ರಾಹಕರ ಅಭಿರುಚಿಗೆ ತಕ್ಕಂತೆ ತಯಾರಿಸಿಕೊಡಲಾಗುವುದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

__ ಸತೀಶ್ ಕಾಪಿಕಾಡ್

Comments are closed.