ಕರಾವಳಿ

ಮಗುವಿನ ಅತ್ಯಾಚಾರ ಕೊಲೆಯ ಅಪಪ್ರಚಾರ: ವ್ಯಾಪಕ ಆಕ್ರೋಷ, ದೂರು ದಾಖಲು

Pinterest LinkedIn Tumblr

ಕುಂದಾಪುರ: ಯಕ್ಷಗಾನದ ಸಂಘಟಕರೋರ್ವರು ಆರು ವರ್ಷ ಪ್ರಾಯದ ಮಗುವನ್ನು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಅಪಪ್ರಚಾರ ಮಾಡಿದ ಬಗ್ಗೆ ಕುಂದಾಪುರ ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ನೊಂದ ಯುವಕ ಬೆಂಗಳೂರಿನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಮೂಲತಃ ಮಾರಣಕಟ್ಟೆ ಸಮೀಪದ ನೈಕಂಬ್ಳಿ ನಿವಾಸಿ ನಾಗರಾಜ ಶೆಟ್ಟಿ ನೈಕಂಬ್ಳಿಯವರು ಬೆಂಗಳೂರಿನಲ್ಲಿ ಹೊಟೆಲ್ ಉದ್ಯೋಗ ಮಾಡಿಕೊಂಡಿದ್ದು ಮೊನ್ನೆನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪರವಾಗಿ ಪೇಸ್ ಬುಕ್ಕಿನಲ್ಲಿ ಪೋಸ್ಟ್ ಮಾಡಿದ್ದು ಈ ಹಿಂದೆಯೇ ಪರ ವಿರೋಧ ಕಮೆಂಟ್ ಬಂದಿತ್ತು. ಆದರೇ ಏಕಾಏಕಿ ಮಂಗಳವಾರ ರಾತ್ರಿ ವೇಳೆ ನಾಗರಾಜ್ ಶೆಟ್ಟಿ ಜೊತೆಗೆ ಅಪರಿಚಿತ ಮಗುವೊಂದರ ಫೋಟೋ ಜೋಡಿಸಿ ಅದನ್ನು ರಾಜ್ಯ ಮಟ್ಟದ ಮಾದ್ಯಮವೊಂದರದಲ್ಲಿ ಸುದ್ದಿ ಪ್ರಸಾರದ ತುಣುಕು ಎನ್ನುವಂತೆ ಸ್ರಷ್ಟಿಸಿ ಅತ್ಯಾಚಾರ ಹಾಗೂ ಕೊಲೆ ಆರೋಪಿ ಎಂದು ನಾಗರಾಜ ಶೆಟ್ಟಿವರನ್ನು ಬಿಂಬಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಡಲಾಗಿದೆ.

ಈ ಬಗ್ಗೆ ನೊಂದ ನಾಗರಾಜ ಶೆಟ್ಟಿ ನೈಕಂಬ್ಳಿ ಅವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಅನಿಲ್ ಹಾರಾಡಿ ಎನ್ನುವವರ ಮೇಲೆ ಗುಮಾನಿಯಿದೆ. ಹಾಗೂ ಸುಳ್ಳು ಐಡಿ ಮೂಲಕ ಕೀರ್ತಿ ವೇಣೂರು ಪೇಸು ಬುಕ್ಕಿನಲ್ಲಿ ಹಾಕಿದ್ದಾರೆ. ವಾಟ್ಸಾಪ್ ಮೂಲಕ ಇಮ್ತಿಯಾಜ್ ಎಂಬಾತ ಪ್ರಸರಣ ಮಾಡಿದ್ದು ತನ್ನ ವಿರುದ್ಧ ಸುಳ್ಳು ಅಪಾಧನೆ ಮಾಡಿ ತೇಜೋವಧೆಯ ಮೂಲಕ ಮಾನ ಹಾನಿ ಮಾಡಲು ಯತ್ನಿಸಿದ ಎಲ್ಲರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments are closed.