ಕರಾವಳಿ

ದನದ ವ್ಯಾಪಾರಿ ಹುಸೈನಬ್ಬ ಅನುಮಾನಾಸ್ಪದ ಸಾವು: ಹಿರಿಯಡ್ಕ ಎಸ್‌ಐ ಅಮಾನತು

Pinterest LinkedIn Tumblr

ಉಡುಪಿ: ಕಳೆದೆರಡು ದಿನಗಳ ಹಿಂದೆ ಹಿರಿಯಡಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಅವರ ಸಂಶಯಾಸ್ಪದ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಹಿರಿಯಡ್ಕ ಎಸ್‌ಐ ಡಿ.ಎನ್. ಕುಮಾರ್ ದನ ಹಿರಿಯಡ್ಕದನ ಹಿರಿಯಡ್ಕ ಅವರನ್ನು ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಅವರು ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಪೆರ್ಡೂರು ಗ್ರಾಮದ ಕೊತ್ಯಾರು ಹಾಡಿಯಲ್ಲಿ ಬುಧವಾರ ನಡೆದ ಹುಸೈನಬ್ಬ ಅವರ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದ್ದು, ಇತರ ಯಾವುದೇ ಪೊಲೀಸರಿಂದ ಕರ್ತವ್ಯ ಲೋಪ ಆಗಿರುವುದು ತನಿಖೆ ಸಂದರ್ಭ ಕಂಡುಬಂದರೆ ಅಂಥವರ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿಯವರು ತಿಳಿಸಿದ್ದಾರೆ.

ಕೆಲವಾರು ವರ್ಷಗಳಿಂದ ದನದ ವ್ಯಾಪಾರ ಮಾಡಿಕೊಂಡಿದ್ದ ಹುಸೆನಬ್ಬ ವ್ಯಾಪಾರದ ಸಲುವಾಗಿ ಪೆರ್ಡೂರಿಗೆ ಹೋಗಿದ್ದರು. ಅವರ ಮೃತದೇಹವು ಶರೀರದ ಮೇಲೆ ಗಾಯಗಳಿರುವ ಸ್ಥಿತಿಯಲ್ಲಿ ಕೊತ್ಯಾಡಿ ಹಾಡಿಯಲ್ಲಿ ಪತ್ತೆಯಾಗಿದ್ದು, ಹುಸೇನಬ್ಬ ಅವರನ್ನು ಪೆರ್ಡೂರು ಬಜರಂಗದಳದ ಮುಖಂಡ ಸೂರ್ಯ(ಸೂರಿ) ಮತ್ತು ಇತರ ಕಾರ್ಯಕರ್ತರು ಹೊಡೆದು ಕೊಲೆಗೈದಿದ್ದಾರೆ ಎಂದು ಆರೋಪಿಸಿ ಸಹೋದರ ಮೊಹ್ಮದ್ ಅವರು ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು.

Comments are closed.