ಕರಾವಳಿ

ಮಹಾಮಳೆಗೆ ಬಿಜೈ ಅನೆಗುಂಡಿಯಲ್ಲಿ ಧರಶಾಹಿಯಾದ ಮನೆ : ಸಂಸದ ನಳಿನ್ ಹಾಗೂ ಶಾಸಕ ಕಾಮಾತ್ ಭೇಟಿ – ಪರಿಶೀಲನೆ

Pinterest LinkedIn Tumblr

ಮಂಗಳೂರು : ಮಂಗಳೂರು ನೆರೆ ಪೀಡಿತ ಪ್ರದೇಶಗಳಿಗೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರ ಜೊತೆಗೂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಳೆ ಹಿನ್ನೆಲೆಯಲ್ಲಿ ಮನೆಯೊಂದು ಕುಸಿದು ಸಂಪೂರ್ಣ ಧರಶಾಹಿಯಾದ ಬಿಜೈ ಅನೆಗುಂಡಿ ಹಾಗೂ ಮಳೆಯ ತೀವ್ರತೆಗೆ ಹಾನಿಗೊಳಗಾದ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಮನೆಗಳಿಗೆ ಹಾನಿ ಸಂಭವಿಸಿದ ಜನತೆಗೆ ಪರಿಹಾರ ಒದಗಿಸುವ ಭರವಸೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜನರು ಯಾವುದೇ ಭಯ ಭೀತರಾಗುವ ಅಗತ್ಯವಿಲ್ಲ.ಯಾವುದೇ ಸಹಾಯಬೇಕಾಗಿದ್ದಲ್ಲಿ ಜಿಲ್ಲಾಢಳಿತ ಹಾಗೂ ನಮ್ಮನ್ನು ನೇರವಾಗಿ ಸಂಪರ್ಕಿಸಬಹದುಗಿದೆ .ಜಿಲ್ಲಾಡಳಿತ ಈಗಾಗಲೇ ಅಗತ್ಯ ಕ್ರಮ ಗಳನ್ನೂ ಕೈಗೊಂಡಿದೆ .ಸಂಭಾವ್ಯ ಅಪಾಯ ಎದುರಿಸಲು ಸನ್ನದ್ಧವಾಗಿದೆ .ಬಿಜೆಪಿ ಕಚೇರಿಯಲ್ಲೂ ಸಹಾಯವಾಣಿ ಆರಂಭಿಸಲಾಗಿದೆ .ಸಂಘನಿಕೇತನದಲ್ಲಿಯೂ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು .

ವೈದ್ಯರ ತಂಡ ಹಾಗೂ ಆಂಬುಲೆನ್ಸ್ ಕೂಡ ಸೇವೆಗೆ ಸಿದ್ಧವಾಗಿದೆ. ಕದ್ರಿ, ಶಕ್ತಿನಗರ , ಕುಂಟಲ್ಪಾಡಿ, ಸರಿಪಳ್ಳ ಮತ್ತಿತರ ಕಡೆಗಳಲ್ಲಿ ಹಾಗೂ ಪಡೀಲ್ ಸೇರಿದಂತೆ ಹೆದ್ದಾರಿಯ ಕೆಲವೆಡೆ ಸಮಸ್ಯೆ ಉಂಟಾಗಿದ್ದು ಅಲ್ಲಿಯೂ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ಹೇಳಿದರು .

ಮಂಗಳೂರಿನಲ್ಲಿ ಅತಿ ವೃಷ್ಠಿಯಿಂದಾಗಿ 100 ಕೋಟಿ ರೂ. ನಷ್ಟು ಆಸ್ತಪಾಸ್ತಿ ಹಾನಿ ಸಂಭವಿಸಿದೆ. ರಾಜ್ಯ ಸರಕಾರ ತಕ್ಷಣವೇ 100 ಕೋಟಿ ಯ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸಂಸದರು ಆಗ್ರಹಿಸಿದರು.

ಮಂಗಳೂರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಸುದ್ಧಿಗಾರರ ಜೊತೆ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್, ರಾಜ್ಯ ಸರಕಾರ ಹಾಗೂ ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದ ಈ ರೀತಿಯ ಘಟನೆಗಳು ನಡೆದಿವೆ. ಭಾರಿ ಮಳೆಯಿಂದಾಗಿ ಮಂಗಳೂರಿನಲ್ಲಿ ಸಾವಿರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಆದರೆ ಮುಖ್ಯಮಂತ್ರಿಗಳು ಜನರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಆದರೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನ ಜನರಿಗೆ ಸಾಂತ್ವನ ಹೇಳಿದ್ದಾರೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಸುರಿಯುತ್ತಿರುವ ತೀವ್ರ ಮಳೆ ಹತೋಟಿಗೆ ಬಂದಿದ್ದು, ಜನರು ಯಾವುದೇ ಭಯ ಭೀತರಾಗುವ ಅಗತ್ಯವಿಲ್ಲ..ಯಾವುದೇ ಸಹಾಯಬೇಕಾಗಿದ್ದಲ್ಲಿ ತಮ್ಮನ್ನು ಸಂಪರ್ಕಿಸುವಂತೆ ವೇದವ್ಯಾಸ್ ಕಾಮತ್ ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಮಳೆಹಾನಿಯಿಂದ ಸಂತೃಸ್ತರಾದ ಕುಟುಂಬಳಗಳಿಗೆ ಸಂಘನಿಕೇತನದಿಂದ ವಾಹನಗಳ ಮೂಲಕ ಉಟವನ್ನು ಸರಬಾರಾಜು ಮಾಡಲಾಗಿದೆ ಎಂದವರು ಹೇಳಿದರು.

Comments are closed.