ಉಡುಪಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ವರುಣ ಇನ್ನೊಂದು ಬಲಿ ಪಡೆದಿದ್ದಾನೆ. ಶಾಲೆ ಮುಗಿಸಿ ಬರುತ್ತಿದ್ದ ಸಹೋದರಿಯರಿಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು ಓರ್ವಳನ್ನು ಸ್ಥಳೀಯರು ರಕ್ಷಿಸಿದ್ದಾರೆ, ಇನ್ನೋರ್ವ ಬಾಲಕಿ ನಾಪತ್ತೆಯಾಗಿದ್ದು ಇಂದು ಬೆಳಗ್ಗೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ. ಉಡುಪಿ ಜಿಲ್ಲೆಯ ಪಡುಬಿದ್ರಿ ಠಾಣಾ ವ್ಯಾಪ್ತಿ ಪಾದೆಬೆಟ್ಟು ಪಟ್ಲ ಎಂಬಲ್ಲಿ ಈ ಘಟನೆ ನಡೆದಿದೆ.
ಪಡುಬಿದ್ರಿ ಗಣಪತಿ ಶಾಲೆಯ ನಾಲ್ಕನೆಯ ತರಗತಿ ವಿದ್ಯಾರ್ಥಿನಿ ನಿಧಿ ಆಚಾರ್ಯ (9) ತನ್ನ ಅಕ್ಕ ನಿಶಾ ಜೊತೆ ಪಟ್ಲ ಕಿರುಸೇತುವೆ ದಾಟುತ್ತಿದ್ದ ವೇಳೆ ನೀರು ಸೇತುವೆ ಮೇಲೆ ಹರಿಯುವ ರಭಸಕ್ಕೆ ನೀರು ಪಾಲಾಗಿದ್ದಾರೆ. ನಿಶಾಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ನೀರು ಪಾರಾದ ನಿಧಿಗಾಗಿ ಸತತ ಶೋಧ ನಡೆಸಿದ್ದು ಇಂದು ಬೆಳಿಗ್ಗೆ ಆಕೆ ಮ್ರತದೇಹ ಪತ್ತೆಯಾಗಿದೆ. ಸದ್ಯ ಶವವನ್ನು ಮರಣೋತ್ತರ ಪರೀಕ್ಷಗೆ ರವಾನಿಸಲಾಗಿದೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
Comments are closed.