ಕರಾವಳಿ

ಐಪಿಎಲ್ ಬೆಟ್ಟಿಂಗ್ ಠುಸ್…ಇಲೆಕ್ಷನ್ ಬೆಟ್ಟಿಂಗ್ ಪ್ಲಸ್! ಜಿಲ್ಲೆಯಲ್ಲಿ ಬೆಟ್ಟಿಂಗ್ ಹವಾ…ಜೋರು ಶಿವಾ!

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ಹವಾ ಒಂದೆಡೆಯಾದರೇ ಚುನಾವಣಾ ಫಲಿತಾಂಶದ ಮೇಲಿನ‌ ಬೆಟ್ಟಿಂಗ್ ಹವಾ ಜೋರಾಗಿ ನಡೀತಾ ಇದೆ. ಇಡೀ‌ ಜಿಲ್ಲೆಯಲ್ಲಿನ 5 ವಿಧಾನ ಸಭಾ ಕ್ಷೇತ್ರದಲ್ಲಿ ಯಾರ್ ಗೆಲ್ತಾರೆ ಯಾರ್ ಸೋಲ್ತಾರೆ ಅನ್ನೋ‌ ಚರ್ಚೆ ನಡೀತಾ ಇದ್ದು ಮತ್ತೊಂದೆಡೆ ಅಭ್ಯರ್ಥಿಗಳ‌‌ ಪರ ಬೆಟ್ಟಿಂಗ್ ಕೂಡ ಹಾಕಲಾಗುತ್ತಿದೆ. ಗೆಲವು, ಗೆಲುವಿನ ಅಂತರ, ಪಡೆದುಕೊಳ್ಳುವ ಮತದ ಮೇಲೆ ಲಕ್ಷಾಂತರ ಬೆಟ್ಟಿಂಗ್ ನಡೆಯುತ್ತಿದೆ.

ಇನ್ನೂ‌ ಪ್ರಮುಖವಾಗಿ ಕಾಪು ಉಡುಪಿ ಹಾಗೂ ಬೈಂದೂರು ಕ್ಷೇತ್ರ ದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ‌ ಮೇಲೆ ಬೆಟ್ಟಿಂಗ್ ಹಾಕಲಾಗುತ್ತಿದೆ. ಈ ಮೂರು ಕ್ಷೇತ್ರ ದಲ್ಲಿ ಕಾಂಗ್ರೆಸ್‌ ನಲ್ಲಿ ಹಾಲಿ ಕಾಂಗ್ರೆಸ್ ಶಾಸಕರು ಸ್ಪರ್ದೆಯಲಿದ್ದರು. ಈ‌ ಮೂರು‌ ಕ್ಷೇತ್ರದಲ್ಲೂ ಹಾಲಿ ಎಂಎಲ್ಎಗಳೇ ಗೆಲ್ಲುವ ಕುದುರೆ ಅಂತಾ ಹೇಳಾಲಾಗುತ್ತಿತ್ತು. ಅದ್ರೆ ಉಡುಪಿಗೆ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಅಗಮಿಸಿದ ನಂತರ ಈ ಕ್ಷೇತ್ರಗಳಲ್ಲಿ‌ ಬಿಜೆಪಿ ತನ್ನ ಬಲವನ್ನು ವೃದ್ದಿಸಿ ಕೊಂಡಿತ್ತು. ಹೀಗಾಗಿ ಬೈಂದೂರಿನ ಗೋಪಾಲ ಪೂಜಾರಿ ಹಾಗೂ ಸುಕುಮಾರ್ ಶೆಟ್ಟಿ, ಕಾಪುವಿನ ವಿನಯ್ ಕುಮಾರ್ ಸೊರಕೆ ಹಾಗೂ ಲಾಲಾಜಿ ಅರ್ ಮೆಂಡನ್ ಮತ್ತು ಉಡುಪಿಯ ಪ್ರಮೋದ್ ಮಧ್ವರಾಜ್ ಹಾಗೂ ರಘುಪತಿಭಟ್ ಮಧ್ಯೆ ಭಾರೀ ಪೈಪೊಟಿ ಎರ್ಪಟ್ಟಿತ್ತು.

ಪ್ರಮುಖವಾಗಿ‌ ಭಾರೀ‌ ಕೂತುಹಲ ಕೆರಳಿಸಿರುವ ಉಡುಪಿ ಕ್ಷೇತ್ರದಲ್ಲಿ ಹೆಚ್ಚು ಬೆಟ್ಟಿಂಗ್ ಕಾಣಿಸಿಕೊಂಡಿದ್ದು‌, ಗೆಲ್ಲುವ ಕುದುರೆ ಪರ ಬೆಟ್ಟಿಂಗ್ ಹಾಕಲಾಗುತ್ತಿದೆ. ಹೆಚ್ಚಿನವರು ಲಕ್ಷಾಂತರ ರೂಪಾಯಿಗಳನ್ನು ಹಾಕುತ್ತಿದ್ರೆ,ಇನ್ನೂ ಕೆಲವೊಬ್ಬರು ತಮ್ಮ ಭೂಮಿಗಳನ್ನೇ ಬೆಟ್ಟಿಂಗ್ ಇಡುತ್ತಿದ್ದಾರೆ‌ ಎನ್ನಲಾಗಿದೆ. ಚುನಾವಣಾ ರಿಸಲ್ಟ್ ನಿಂದ ಐಪಿಎಲ್ ಕ್ರಿಕೆಟ್ ಪರ ಬೆಟ್ಟಿಂಗ್ ಅಡುತ್ತಿದ್ದವರ ಸಂಖ್ಯೆ ತೀರಾ ಕಡಿಮೆಯಾಗಿದೆ.

ನಾಳಿನ‌ ಚುನಾವಾಣಾ ಫಲಿತಾಂಶದಲ್ಲಿ ಯಾರು ಗೆಲ್ತಾರೋ ಯಾರ್ ಸೋಲ್ತಾರೊ ಗೊತ್ತಿಲ್ಲ .ಅದ್ರೆ ಅಭ್ಯರ್ಥಿಗಳ ಸೋಲು ಗೆಲುವು ಬೆಟ್ಟಿಂಗ್ ಹಾಕಿರುವವರ ಭವಿಷ್ಯ ನಿರ್ಧರಿಸುವುದಂತು‌ ಸತ್ಯ.

Comments are closed.