ಕರಾವಳಿ

ಕಾರ್ಕಳ: ಖಾಸಗಿ ಬಸ್ ಹಾಗೂ ಬೈಕ್ ಡಿಕ್ಕಿ:ಸವಾರ ಸಾವು

Pinterest LinkedIn Tumblr

ಉಡುಪಿ: ಖಾಸಗೀ ಬಸ್ಸುವೊಂದು ದ್ವಿ ಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಉಡುಪಿಯ ಜಾರ್ಕಳ ಮುಖ್ಯ ಹೆದ್ದಾರಿಯಲ್ಲಿ ನಡೆದಿದೆ. ಜಾರ್ಕಳ ನಿವಾಸಿ ಸತೀಶ್ ಶೆಟ್ಟಿ ಎಂಬವರು ಮೃತ ಪಟ್ಟ ದುರ್ದೈವಿಯಾಗಿದ್ದಾರೆ.

ಕಾರ್ಕಳದಿಂದ ಜಾರ್ಕಳದ ಕಡೇ ಬೈಕ್ ಸವಾರ ತೆರಳುತ್ತಿದ್ದ ವೇಳೆ ಉಡುಪಿಯಿಂದ ಕಾರ್ಕಳದತ್ತ ಬರುತ್ತಿದ್ದ ದೇವಿ ಖಾಸಗೀ ಬಸ್ಸು ವೇಗವಾಗಿ ಬಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಬಹುದೂರ ಎಸೆಯಲ್ಪಟ್ಟಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಗಾಯಾಳು ಸತೀಶ್ ಮಣಿಪಾಲ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯೆ ಮೃತಪಟ್ಟಿದ್ದಾರೆ. ಪ್ರಕರಣ ಕಾರ್ಕಳ ಠಾಣೆಯಲ್ಲಿ ದಾಖಲಾಗಿದೆ.

Comments are closed.