ಕರಾವಳಿ

ಮತದಾನ ಪ್ರಕ್ರಿಯೆ ಆರಂಭ : ದ.ಕ. ಜಿಲ್ಲೆಯಲ್ಲಿ ಬಿಗು ಭದ್ರತೆಯಲ್ಲಿ ಶಾಂತಿಯುತ ಮತದಾನ

Pinterest LinkedIn Tumblr

ಮಂಗಳೂರು, ಮೇ 12: ದ.ಕ. ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತಗಟ್ಟೆಗಳಲ್ಲಿ ಮತದಾರರು ಮುಂಜಾನೆಯಿಂದಲೇ ಸರದಿ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕು ಚಲಾಯಿಸಲು ಆರಂಭಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಆರಂಭಗೊಂಡ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಬಳಿಕ ಬಿರುಸಿನಿಂದ ಸಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1848 ಮತಗಟ್ಟೆಗಳಲ್ಲಿ ಬಿಗು ಭದ್ರತೆಯಲ್ಲಿ ಶಾಂತಿಯುತ ಮತದಾನ ನಡೆದಿದೆ.

ಬೆಳಿಗ್ಗಿನಿಂದ ಬಿರುಸಿನಿಂದ ಮತದಾನ ನಡೆಯುತ್ತಿದ್ದು, 9 ಗಂಟೆಗೆ ಸುಮಾರು 16 ಶೇಕಡಾ ಮತದಾನವಾದ ವರದಿಯಾಗಿದೆ. ಕೆಲವೆಡೆ ಮತಯಂತ್ರದಲ್ಲಿ ದೋಷ ಕಂಡುಬಂದ ಬಗ್ಗೆ ವರದಿಯಾಗಿದೆ. ಮಂಗಳೂರಿನ ಬಿಜೈ ಮತಕೇಂದ್ರಲ್ಲಿ ಇವಿಎಂ ನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಮತಕೇಂದ್ರವೊಂದರಲ್ಲಿ ಮತ್ತು ಬೆಳ್ತಂಗಡಿಯ ಮುಂಡಾಜೆ ಮತಗಟ್ಟೆಯಲ್ಲಿ ಮತಯಂತ್ರದ ತೊಂದರೆಯಿಂದಾಗಿ ಕೆಲ ಕಾಲ ಮತದಾನ ಸ್ಥಗಿತಗೊಂಡಿತ್ತು. ಉಳಿದಂತೆ ಎಲ್ಲೆಡೆ ಶಾಂತಿಯುತ ಮತದಾನ ನಡೆದ ಬಗ್ಗೆ ವರದಿಯಾಗಿದೆ.

ಜಿಲ್ಲೆಯಲ್ಲಿ ಒಟ್ಟು 1858 ಮತಗಟ್ಟೆಗಳಿಲ್ಲಿ ಇಂದು ಮತದಾನ ನಡೆಯುತ್ತಿದ್ದು, 13,176 ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ 97 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್, 221 ಮತಗಟ್ಟೆಗಳಲ್ಲಿ ಮೈಕ್ರೋ ವೀಕ್ಷಕರ ಕಣ್ಗಾವಲಿನೊಂದಿಗೆ ಮತದಾನ ನಡೆಯುತ್ತಿದೆ.

Comments are closed.