ಕ್ರೀಡೆ

ಚೆನ್ನೈಗೆ ಸೋಲಿನ ರುಚಿ ತೋರಿಸಿದ ರಾಜಸ್ತಾನ ರಾಯಲ್ಸ್; ಜೋಸ್‌ ಬಟ್ಲರ್‌ ಅಜೇಯ ಅರ್ಧಶತಕ

Pinterest LinkedIn Tumblr

ಜೈಪುರ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ತಾನ ರಾಯಲ್ಸ್ ಭರ್ಜರಿ ಜಯ ಗಳಿಸಿದೆ.

ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ 95 ರನ್ ಗಳ ನೆರವಿನಿಂದ ರಾಜಸ್ತಾನ ರಾಯಲ್ಸ್ ತಂಡ 4 ವಿಕೆಟ್ ಗಳಿಂದ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು. 177 ರನ್ ಗಳ ಗುರಿ ಬೆನ್ನಟ್ಟಿದ ರಾಜಸ್ತಾನ ರಾಯಲ್ಸ್ ತಂಡ ಇನ್ನು 1 ಎಸತೆ ಬಾಕಿ ಇರುವಂತೆ ಗೆಲುವಿನ ನಗೆ ಬೀರಿತು.

ಚೆನ್ನೈ ಪರ ಶೇನ್ ವಾಟ್ಸನ್ 39, ಸುರೇಶ್ ರೈನಾ 52, ಎಂಎಸ್ ಧೋನಿ 33 ಮತ್ತು ಬಿಲ್ಲಿಂಗ್ಸ್ 27 ರನ್ ಬಾರಿಸಿದ್ದರು.

ರಾಜಸ್ತಾನ ರಾಯಲ್ಸ್ ಪರ ಜೋಸ್ ಬಟ್ಲರ್ 95, ಸಂಜು ಸ್ಯಾಮ್ಸನ್ 21, ಸ್ಟುವರ್ಟ್ ಬಿನ್ನಿ 22 ಮತ್ತು ಗೌತಮ್ 13 ರನ್ ಗಳಿಸಿದ್ದಾರೆ.

Comments are closed.