ಕ್ರೀಡೆ

ಪ್ರೀತಿ ಜಿಂಟಾ ಮತ್ತು ಸೆಹ್ವಾಗ್ ನಡುವೆ ಕಿತ್ತಾಟ ! ಕಾರಣವೇನು ಗೊತ್ತೇ..?

Pinterest LinkedIn Tumblr

ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸೋಲು ತಂಡದ ಮೆಂಟರ್ ವೀರೇಂದ್ರ ಸೆಹ್ವಾಗ್ ಹಾಗೂ ಸಹ ಮಾಲೀಕ ಪ್ರೀತಿ ಜಿಂಟಾ ನಡುವೆ ವೈಮನಸ್ಸಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ರಾಜಸ್ತಾನದ ವಿರುದ್ಧ ಪಂದ್ಯದಲ್ಲಿ ಸುಲಭ ಮೊತ್ತವನ್ನು ಬೆನ್ನಟ್ಟಲು ತಂಡ ವಿಫಲವಾಗಲು ಮೆಂಟರ್ ಸೆಹ್ವಾಗ್ ಅವರ ನಿರ್ಧಾರವೇ ಕಾರಣ ಎಂದು ಪ್ರೀತಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಪಂದ್ಯದಲ್ಲಿ ನಾಯಕ ಅಶ್ವಿನ್ ಅವರಿಗೆ ಬ್ಯಾಟಿಂಗ್ ನಲ್ಲಿ ಮುಂಬಡ್ತಿ ನೀಡಿ ನಂಬರ್ 3ನೇ ಸ್ಥಾನದಲ್ಲಿ ಕಳಿಸಲಾಗಿತ್ತು. ಆದರೆ ಪಂದ್ಯದಲ್ಲಿ ಅಶ್ವಿನ್ ಶೂನ್ಯಕ್ಕೆ ಔಟಾಗಿದ್ದು ಎಲ್ಲ ಲೆಕ್ಕಾಚಾರಗಳು ತಲೆ ಕೆಳಗಾಗಿದ್ದವು. ಸದ್ಯ ಪಂದ್ಯದ ಫಲಿತಾಂಶದಿಂದ ಪ್ರೀತಿ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಕುರಿತು ಮಾಧ್ಯಮಗಳು ಸೆಹ್ವಾಗ್ ಮತ್ತು ಪ್ರೀತಿ ಜಿಂಟಾ ಅವರ ಪ್ರತಿಕ್ರಿಯೆ ಕೇಳಿದ್ದಾಗ ಇಬ್ಬರು ಈ ಕುರಿತು ಮಾತನಾಡಲು ನಿರಾಕರಿಸಿದ್ದಾರೆ.

Comments are closed.