ಕರಾವಳಿ

ಮಂಗಳೂರಿನಲ್ಲಿ ದಕ್ಷಿಣ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ರಿಂದ ಬೃಹತ್ ರೋಡ್ ಶೋ….

Pinterest LinkedIn Tumblr

ಮಂಗಳೂರು, ಮೇ.11: ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ರೋಡ್ ಶೋ ಗುರುವಾರ ಸಂಜೆ ಮಂಗಳೂರಿನಲ್ಲಿ ನಡೆಯಿತು.

ನಗರದ ಕೊಡಿಯಾಲ್ ಬೈಲ್ ನಿಂದ ಹೊರಟ ಪಾದಯಾತ್ರೆಯು ಬಂಟ್ಸ್ ಹಾಸ್ಟೇಲ್, ಜ್ಯೋತಿ ವೃತ್ತ, ಬಲ್ಮಠ ರಸ್ತೆ, ಹಂಪನಕಟ್ಟೆ ಸಿಗ್ನಲ್ ವೃತ್ತ, ಟವರ್ ಕ್ಲಾಕ್ ಮೂಲಕ ಆರ್ ಟಿ ಓ ವೃತ್ತದ ಬಳಿ ಸಾಗಿ ಬಳಿಕ ಮರಳಿ ಪುರಭವನದ ಮುಂಭಾಗದಲ್ಲಿರುವ ಕ್ಲಾಕ್ ಟವರ್ ವೃತ್ತದಲ್ಲಿ ಸಮಾಪನಗೊಂಡಿತು.ರೋಡ್ ಶೋನಲ್ಲಿ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಈಗಾಗಲೆ ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸಿರುವ ಬೆನ್ನಿಗೆ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಷಾ ಅವರು ಕೂಡಾ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರಿಗೆ ಮತ ನೀಡುವಂತೆ ಪ್ರಚಾರ ನಡೆಸಿದರು.

Comments are closed.