ಕರಾವಳಿ

ಎಪ್ರಿಲ್ 29 : ಉಪರಾಷ್ಟ್ರಪತಿ ಮಂಗಳೂರಿಗೆ

Pinterest LinkedIn Tumblr

ಮಂಗಳೂರು ಏಪ್ರಿಲ್ 26 : ಉಪರಾಷ್ಟ್ರಪತಿ ಎಮ್.ವೆಂಕಯ್ಯ ನಾಯ್ಡು ಅವರು ಎಪ್ರಿಲ್ 29 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ.
ಅಂದು ಬೆಳಿಗ್ಗೆ 9.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಉಪರಾಷ್ಟ್ರಪತಿಗಳು, ಬಳಿಕ ಹೆಲಿಕಾಪ್ಟರ್ ನಲ್ಲಿ ಕಾಸರಗೋಡಿಗೆ ತೆರಳಲಿದ್ದಾರೆ.

ಮಧ್ಯಾಹ್ನ 1 ಗಂಟೆಗೆ ಮಂಗಳೂರಿಗೆ ಹಿಂದಿರುಗುವ ಉಪರಾಷ್ಟ್ರಪತಿಗಳು ಅಂದು ರಾತ್ರಿ ನಗರದಲ್ಲಿ ವಾಸ್ತವ್ಯ ಹೂಡುವರು ಎ.30 ರಂದು ಮಧ್ಯಾಹ್ನ 12.20 ಗಂಟೆಗೆ ವಿಶೇಷ ವಿಮಾನದ ಮೂಲಕ ಕೊಚ್ಚಿನ್‍ಗೆ ತೆರಳಲಿದ್ದಾರೆ.

ಉಪರಾಷ್ಟ್ರಪತಿಗಳ ಪ್ರವಾಸ ನಿಮಿತ್ತ ಬುಧವಾರ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅಧ್ಯಕ್ಷತೆಯಲ್ಲಿ ಉನ್ನತ ಅಧಿಕಾರಿಗಳ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

Comments are closed.