ಕರಾವಳಿ

ಸಂಘ ಪರಿವಾರದ ಯುವತಿಯ ಹೆಸರಲ್ಲಿ ಮಾನಹಾನಿಕರ ಪೋಸ್ಟ್: ಕೇಸು ದಾಖಲು

Pinterest LinkedIn Tumblr

ಕುಂದಾಪುರ: ಸಂಘ ಪರಿವಾರದಲ್ಲಿ ಸರೀಯವಾಗಿದ್ದ ಯುವತಿಯೋರ್ವ ಹೆಸರಿನಲ್ಲಿ ಮಾನಹಾನಿಕರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಫೋಟೋ ಹಾಗೂ ಬರಹಗಳನ್ನು ಕಳುಹಿಸಿದ ಬಗ್ಗೆ ಯುವತಿ ಕುಂದಾಪುರ ಮೂಲದ ಚೈತ್ರಾ ಎನ್ನುವವರು ಉಡುಪಿಯ ಸೆನ್‌ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸುಮಾರು ಮೂರು ವರ್ಷಗಳ ಹಿಂದೆ ಜಿಲ್ಲೆಯ ಯಾವುದೋ ಭಾಗದಲ್ಲಿ ನಡೆದ ಪ್ರಕರಣವೊಂದರ ಫೋಟೋವನ್ನು ವಿರೂಪಗೊಳಿಸಿ ಅದರಲ್ಲಿ ಚೈತ್ರಾ ಅವರ ಫೋಟೋ ಸೇರಿಸಿ ಮಾನ ಹಾನಿಕರವಾಗಿ ಬರಹವನ್ನು ಬರೆದ ಕಿಡಿಗೇಡಿಗಳು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಎ.20ರಂದು ರಾತ್ರಿ ಇಲಿಯಾಸ್ ಎಂಬಾತ ಕಳಿಸಿದ ಫೊಸ್ಟ್ ಚೈತ್ರಾ ಅವರ ಸ್ನೇಹಿತೆ ಮೂಲಕವಾಗಿ ತಿಳಿದಿದ್ದು ಇತರ ಆರೋಪಿಗಳಾದ ಅನಿಲ್ ಹಾರಾಡಿ ಶೆಟ್ಟಿ, ದಿನೇಶ ನಾಯ್ಕ್‌, ಅಭಿನಂದನ್ ಟಿ.ಜೆ. ಮಂಡ್ಯ, ಮಜೀದ್‌ ನೇತ್ರಾವತಿ, ಶಪೀಕ್‌ಮಂಗಳೂರು, ರಾಜು ರಾಜು ರಾಜು, ಮನಸೂರ್‌ ಅಹಮದ್‌, ಗಣೇಶ, ಶಾಹೀದ್‌ ಎನ್ನುವವರು ಕೂಡ ಈ ನಕಲಿ ಪೊಸ್ಟ್‌‌‌ನ್ನು ವಾಟ್ಸಾಪ್ ಹಾಗೂ ಪೇಸ್ಬುಕ್ ಮೊದಲಾದ ಜಾಲತಾಣಗಳಲ್ಲಿ ನಿರಂತರವಾಗಿ ರವಾನಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನ್ನ ವಿರುದ್ಧ ಸುಳ್ಳು ಹಾಗೂ ನಕಲಿಯಾದ ಮಾನಹಾನಿಕರ ಪೊಸ್ಟ್‌‌‌ನ್ನು ಸಾಮಾಜಿಕ ಜಾಲತಾಣದಲ್ಲಿ ದುರುದ್ದೇಶದಿಂದ ನಿರಂತರವಾಗಿ ರವಾನಿಸಿ ಮಾನಸಿಕ ಹಿಂಸೆ ನೀಡಿ, ತೇಜೋವಧೆ ಹಾಗೂ ಮಾನಹಾನಿ ಉಂಟು ಮಾಡಿರುವ ಬಗ್ಗೆ ಚೈತ್ರಾ ಪ್ರಕರಣ ದಾಖಲು ಮಾಡಿದ್ದಾರೆ.

Comments are closed.