ರಾಷ್ಟ್ರೀಯ

ಮೋದಿ ವಿರುದ್ಧವಾಗಿ ಟ್ವೀಟ್ ಮಾಡಿ ಕ್ಷಮೆ ಕೋರಿದ ಐಸಿಸಿ

Pinterest LinkedIn Tumblr

ನವದೆಹಲಿ: ಕ್ರಿಕೆಟ್ ವಿಚಾರಗಳನ್ನು ಮಾತ್ರ ಟ್ವೀಟ್ ಮಾಡುತ್ತಿದ್ದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರಧಾನಿ ಮೋದಿ ವಿರುದ್ಧವಾಗಿ ಟ್ವೀಟ್ ಮಾಡಿ ಎಡವಟ್ಟು ಮಾಡಿಕೊಂಡಿದೆ.

ಅಪ್ರಾಪ್ತೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇಂದು ಜೀವಾವಧಿ ಶಿಕ್ಷೆಗೆ ಗುರಿಯಾದ ಸ್ವಯಂ ಘೋಷಿತ ದೇವ ಮಾನವ ಅಸಾರಾಂ ಬಾಪು ಮತ್ತು ಮೋದಿ ಇರುವ ಹಳೆಯ ವಿಡಿಯೋವನ್ನು ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದರು. ಈ ಟ್ವೀಟನ್ನು ಐಸಿಸಿ ರೀ ಟ್ವೀಟ್ ಮಾಡಿತ್ತು. ಅಷ್ಟೇ ಅಲ್ಲದೇ ಈ ಟ್ವೀಟ್ ಗೆ “ನಾರಾಯಣ ನಾರಾಯಣ” ಎಂದು ಹೆಡ್‍ಲೈನ್ ಬರೆದಿತ್ತು.

ಐಸಿಸಿಯ ಈ ಟ್ವೀಟ್ ಗಮನಿಸಿದ ಬಳಕೆದಾರರು ಪ್ರಶ್ನಿಸಿದ್ದಾರೆ. ಕ್ರಿಕೆಟ್ ಹೊರತಾದ ವಿಚಾರವನ್ನು ಟ್ವೀಟ್ ಮಾಡಿದ್ದು ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಎಡವಟ್ಟು ಗೊತ್ತಾದ ಕೂಡಲೇ ಐಸಿಸಿ ಆ ಟ್ವೀಟ್ ಡಿಲೀಟ್ ಮಾಡಿದೆ.

ಐಸಿಸಿ ಟ್ವಿಟ್ಟರ್ ನಲ್ಲಿ ಕೆಲವೇ ಕ್ಷಣಗಳ ಕಾಲ ಕಾಣಿಸಿಕೊಂಡಿದ್ದರೂ ಈ ಟ್ವೀಟ್ ಅನ್ನು ಹಲವು ಮಂದಿ ಸ್ಕ್ರೀನ್ ಶಾಟ್ ತೆಗೆದಿದ್ದರು. ಈಗ ಐಸಿಸಿಯ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಪ್ರಮಾದಕ್ಕೆ ಕ್ಷಮೆ ಕೇಳಿದ ಐಸಿಸಿ, ಈ ಟ್ವೀಟ್ ಆಗಿದ್ದು ಹೇಗೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದೆ. ಘಟನೆಯ ಕುರಿತು ಭಾರತೀಯ ಕ್ರಿಕೆಟ್ ಮಂಡಳಿ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೇ ಈ ಕುರಿತು ಐಸಿಸಿ ಗಮನಕ್ಕೆ ತಂದು ಮಾಹಿತಿ ಪಡೆಯುವುದಾಗಿ ತಿಳಿಸಿದೆ.

Comments are closed.