ಕರಾವಳಿ

ಸ್ವಾಮಿ ವಿವೇಕಾನಂದರು ಹಾಗೂ ಶ್ರೀನಿವಾಸ ಮಲ್ಯರು ಏರಿದ ಶಿಖರವನ್ನು ಉದಯೋನ್ಮುಖ ನಾಯಕ ವೇದವ್ಯಾಸ್ ಕಾಮಾತ್ ಏರಲಿ : ಶ್ರೀನಿವಾಸ ಮಲ್ಯರ ಮೊಮ್ಮಗ 

Pinterest LinkedIn Tumblr

ನವ ಮಂಗಳೂರಿನ ನಿರ್ಮಾಣಕರ್ತರು ಉಳ್ಳಾಲ ಶ್ರೀನಿವಾಸರು – ಮಂಗಳೂರಿಗೆ ಅವರ ಕೊಡುಗೆ ಅಪಾರ : ಡಿ.ವೇದವ್ಯಾಸ್ ಕಾಮತ್

ಮಂಗಳೂರು, ಎಪ್ರಿಲ್.24 : ಉಳ್ಳಾಲ ಮತ್ತು ಅದರಾಚೆಗಿನ ಪ್ರದೇಶಗಳು ಇಂದು ಮಂಗಳೂರಿಗೆ ಸಂಪರ್ಕ ಸಾಧಿಸಲು ಕಾರಣ ಶ್ರೀನಿವಾಸರು.ನವ ಮಂಗಳೂರು ಬಂದರು ಸ್ಥಾಪನೆಯಾಗಲು ಕಾರಣ ಶ್ರೀನಿವಾಸರು.ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣವಾಗಲು ಕಾರಣ ಶ್ರೀನಿವಾಸರು.ಎನ್.ಐ.ಟಿ.ಕೆ. ಸ್ಥಾಪನೆಯಾಗಲು ಕಾರಣ ಶ್ರೀನಿವಾಸರು.ಮಂಗಳೂರಿಗೆ ಆಕಾಶವಾಣಿ ವಿಸ್ತರಣೆಯಾಗಲು ಕಾರಣ ಶ್ರೀನಿವಾಸರು.ಮಂಗಳೂರಿಗೆ ಎನ್.ಎಚ್ 17 ರಸ್ತೆಯ ನಿರ್ಮಾಣದಲ್ಲಿ, ರೈಲ್ವೇ ಮಾರ್ಗಗಳ ನಿರ್ಮಾಣದಲ್ಲೆಲ್ಲಾ ಮಹತ್ತರ ಪಾತ್ರ ವಹಿಸಿದವರು ಶ್ರೀನಿವಾಸರು.ಹೀಗೆ ಉಳ್ಳಾಲ ಶ್ರೀನಿವಾಸ ಮಲ್ಯರು ಮಂಗಳೂರಿಗೆ ಕೊಟ್ಟಂತಹ ಕೊಡುಗೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಮರೆಯಬಾರದು ಸಹ. ಅಂತಹ ಮಹಾನ್ ನಾಯಕರನ್ನು ಪಕ್ಷ ಭೇದ ಮರೆತು ನಾವು ಗೌರವಿಸುತ್ತೇವೆ ಎಂದು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಡಿ.ವೇದವ್ಯಾಸ್ ಕಾಮತ್ ಅವರು ಉಳ್ಳಾಲ ಶ್ರೀನಿವಾಸ ಮಲ್ಯರ ಮನೆಗೆ ಭೇಟಿ ನೀಡಿದ ನಂತರ ಕದ್ರಿ ಬಳಿ ಇರುವ ಪ್ರತಿಮೆಗೆ ಮಾಲಾರ್ಪಾಣೆಗೈದು ಸ್ಮರಿಸುತ್ತಾ ಹೇಳಿದರು.

ಈ ವೇಳೆ ಮಾತಾಡಿದ ಶ್ರೀನಿವಾಸ ಮಲ್ಯರ ಮೊಮ್ಮಗ ಇದುವರೆಗೆ ನಮ್ಮ ಮನೆಗೆ ಅವರಿವರು ಬಂದು ಫೋಟೋ ತೆಗೆಸಿಕೊಂಡು ಹೋಗಿದ್ದಾರೆ, ಮಾಹಿತಿ ಪಡೆದುಕೊಂಡು ಹೋಗಿದ್ದಾರೆ, ಆದರೆ ಯಾರಿಗೂ ಶ್ರೀನಿವಾಸರ ಕೊಡುಗೆಗಳನ್ನು ಸ್ಮರಿಸುವ ವ್ಯವಧಾನ ಇಲ್ಲ. ಹೋರಾಟದ ಮನೋಭಾವ ಹೊಂದಿದ್ದ ಶ್ರೀನಿವಾಸರು ಜೈಲು ಪಾಲಾಗಿದ್ದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಬಗೆಗಿನ ಪುಸ್ತಕವನ್ನು ಓದುತ್ತಿದ್ದರು. ಆ ಅಮೂಲ್ಯ ಪುಸ್ತಕವನ್ನು ಇಂದು ನಾನು ವೇದವ್ಯಾಸರಿಗೆ ನೀಡುತ್ತಿದ್ದೇನೆ. ಏಕೆಂದರೆ ಈ ಉದಯೋನ್ಮುಖ ನಾಯಕ ವೇದವ್ಯಾಸ್, ಸ್ವಾಮಿ ವಿವೇಕಾನಂದ ಹಾಗೂ ಶ್ರೀನಿವಾಸರು ಏರಿದ ಶಿಖರವನ್ನು ಏರಲಿ ಎಂಬುದು ನನ್ನ ಹಾರೈಕೆ ಎಂದು ಹೃದಯಾಳದಿಂದ ಹರಸುವೆ ಎಂದರು.

ಮೊದಲ ಬಾರಿಗೆ ಒಂದು ಪಕ್ಷದ ಮುಖಂಡ ನಮ್ಮ ಮನೆಗೆ ಭೇಟಿ ನೀಡಿದ್ದು ಸಂತೋಷ ತಂದಿದೆ: ನರಹರಿ ಮಲ್ಯ ಅವರ ಪತ್ನಿ

ಬಿಜೆಪಿ ಅಭ್ಯರ್ಥಿ ವೇದವ್ಯಾಸ್ ಕಾಮತರು ನಮ್ಮ ಮನೆಗೆ ಭೇಟಿ ನೀಡಿದ್ದು ಅತ್ಯಂತ ಸಂತೋಷದ ಸಂಗತಿ. ಇದುವರೆಗೆ ಯಾವೊಬ್ಬ ನಾಯಕರೂ ನಮ್ಮ ಮನೆಗೆ ಭೇಟಿ ನೀಡಿರಲಿಲ್ಲ. ಮಂಗಳೂರಿಗೆ ಕೊಡುಗೆ ಸಲ್ಲಿಸಿದವರು ಬೇರೆ ಪಕ್ಷದವರಾದರೂ ಅವರನ್ನು ಸ್ಮರಿಸುವ ಗುಣ ಹೊಂದಿರುವ ವೇದವ್ಯಾಸರು ಒಬ್ಬ ಜನನಾಯಕನಾಗಲು ಅರ್ಹತೆ ಇರುವ ವ್ಯಕ್ತಿ. ಹೀಗಾಗಿ ಈ ಬಾರಿ ನಾವು ಇವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ ಎಂದು ನರಹರಿ ಮಲ್ಯ ಅವರ ಪತ್ನಿ ತಿಳಿಸಿದರು.

ಈ ಸಂದರ್ಭದಲ್ಲಿ ನರಹರಿ ಮಲ್ಯ, ಪಂಡಿತ್ ನರಸಿಂಹ ಆಚಾರ್ಯ, ವಸಂತ ಜೆ ಪೂಜಾರಿ, ರತ್ನಾಕರ ನಾಯ್ಕ್, ರಿತೇಶ್ ದಾಸ್, ದಿನೇಶ್ ಬಂಗೇರ, ಸಂತೋಷ್, ಲೋಕೇಶ್, ಗಣೇಶ್, ಚೇತನ್, ಶ್ರೀನಾಥ್ ಮಾನೆ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ : ಮಂಜು ನಿರೇಶ್ವಾಲ್ಯ ಹಾಗೂ ದೀಲಿಪ್ ಭಂಡಾರ್‌ಕರ್

Comments are closed.