ಕರಾವಳಿ

ಅಪ್ರಾಪ್ತ ಸಂತ್ರಸ್ಥರ ಹೆಸರು, ಗುರುತು ಬಹಿರಂಗ ಶಿಕ್ಷಾರ್ಹ ಅಪರಾಧ : ಸಂತ್ರಸ್ಥ ಬಾಲಕಿಯರ ಹೆಸರು, ಭಾವಚಿತ್ರ ತೆರವಿಗೆ ಸೂಚನೆ

Pinterest LinkedIn Tumblr

ಮಂಗಳೂರು ಏಪ್ರಿಲ್ 24: ಜಮ್ಮು ಕಾಶ್ಮೀರದ, ಕತುವಾ ಪ್ರದೇಶದಲ್ಲಿ 8 ವರ್ಷದ ಅಪ್ರಾಪ್ತೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವುದನ್ನು ಜಿಲ್ಲೆಯಾದ್ಯಂತ ಖಂಡಿಸಿ ಸಂತ್ರಸ್ಥ ಬಾಲಕಿಯ ಹೆಸರು ಮತ್ತು ಭಾವಚಿತ್ರವನ್ನು ಸಾಮಾಜಿಕ ಜಾಲತಾಣ, ವಾಟ್ಸ್‍ಅಪ್, ಮಾಧ್ಯಮಗಳಲ್ಲಿ, ಫ್ಲೆಕ್ಸ್, ಬ್ಯಾನರ್ ಮೂಲಕ ಪ್ರದರ್ಶಿಸಿರುವುದನ್ನು ಗಮನಿಸಲಾಗುತ್ತಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ (ಪೋಕ್ಸೋ ಕಾಯ್ದೆ) 2012 ರ ಸೆಕ್ಷನ್ 23(2) ರ ಪ್ರಕಾರ ಹಾಗೂ ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ರ ಸೆಕ್ಷನ್ 74 ರ ಪ್ರಕಾರ 18 ವರ್ಷದೊಳಗಿನ ಸಂತ್ರಸ್ಥ ಮಕ್ಕಳ ಹೆಸರು ಮತ್ತು ಗುರುತನ್ನು ಬಹಿರಂಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

ಆದುದರಿಂದ ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸುವುದು ಈಗಾಗಲೇ ಹಾಕಲಾಗಿರುವ ಸಂತ್ರಸ್ಥ ಬಾಲಕಿಯ ಹೆಸರು ಮತ್ತು ಭಾವಚಿತ್ರ ಇರುವ ಪ್ಲೆಕ್ಸ್ ಮತ್ತು ಹೋರ್ಡಿಂಗ್ಸ್‍ನ್ನು ಕೂಡಲೇ ತೆರವುಗೊಳಿಸುವಂತೆ ದ.ಕ. ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Comments are closed.