ಕರಾವಳಿ

ಮಂಗಳೂರಿನ ತೇಲುವ ಹೋಟೆಲ್ ಖ್ಯಾತಿಯ “ಕ್ರೂಸ್ ಎಂಡ್ ಡೈನ್” ರೆಸ್ಟೋರೆಂಟ್‌ ಸಿಡಿಲಿಗೆ ಬಲಿ

Pinterest LinkedIn Tumblr

ಮಂಗಳೂರು, ಎಪ್ರಿಲ್.20 : ಕರಾವಳಿಯ ಪ್ರಥಮ ತೇಲುವ ಹೋಟೆಲ್ ಎಂದೇ ಜನಜನಿತವಾಗಿರುವ ಕ್ರೂಸ್ ಎಂಡ್ ಡೈನ್ ರೆಸ್ಟೋರೆಂಟ್‌ಗೆ ಬುಧವಾರ ರಾತ್ರಿ ಸುರಿದ ಭಾರೀ ಮಳೆ ಸಂದರ್ಭ ಸಿಡಿಲು ಬಡಿದು ಹಾನಿಯಾಗಿದೆ.

ನಗರದ ಹಳೆ ಬಂದರಿನಲ್ಲಿ ಲಂಗರು ಹಾಕಿದ್ದ ಹೋಟೆಲ್ ಸಿಡಿಲಿನ ಪರಿಣಾಮ ಏಕಾಏಕಿ ಹಾನಿಗೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮಂಗಳೂರಿನ ಚರಣ್ ಎಂಬವರಿಗೆ ಸೇರಿದ್ದ ಈ ಬೋಟ್ ಮಂಗಳೂರಿನ ಕರಾವಳಿ ಭಾಗದಲ್ಲಿ ಪ್ರವಾಸಿಗರಿಗೆ ಅತ್ಯಂತ ಆಕರ್ಷಣೆಯ ಕೇಂದ್ರವಾಗಿತ್ತು. ಇದೀಗ ಸಿಡಿಲಿಗೆ ತುತ್ತಾದ ಈ ಕ್ರೂಸ್ ಎಂಡ್ ಡೈನ್ ತೇಲುವ ಹೋಟೆಲ್ ಛಿಧ್ರವಾಗಿದೆ.

ನದಿಯ ಮೇಲೆ ತೇಲುತ್ತಾ ಕರಾವಳಿಯ ಪಾರಂಪರಿಕ ಖಾದ್ಯಗಳನ್ನು ಸವಿಯಲು ಕ್ರೂಸ್ ಎಂಡ್ ಡೈನ್ ಪ್ರಸಿದ್ಧವಾಗಿತ್ತು. ಈ ಬೋಟ್ ಹೋಟೆಲ್‌ನಲ್ಲಿ ತಣ್ಣನೆಯ ತಂಗಾಳಿಯ ನಡುವೆ ನದಿಯ ಮೇಲೆ ತೇಲುತ್ತಾ ಮೀನು ಖಾದ್ಯಗಳನ್ನು ಸವಿಯಲು ಪ್ರವಾಸಿಗರು ಆಗಮಿಸುತ್ತಿದ್ದರು. ನಗರದ ಬಂದರು ಧಕ್ಕೆ ಬಳಿಯ ನದಿ ನೀರಿನಲ್ಲಿರುವ ಈ ಬೋಟ್ ಮೀನುಗಾರಿಕೆಗೆ ಬಳಕೆಯಾಗದೆ, ರೆಸ್ಟೋರೆಂಟ್‌ಗೆಬಳಕೆಯಾಗುತ್ತಿತ್ತು ಎನ್ನಲಾಗಿದೆ.

Comments are closed.