ಕರಾವಳಿ

ಉಡುಪಿ ಕ್ಷೇತ್ರದ ಬಿಜೆಪಿ ಟಿಕೆಟ್ ರಘುಪತಿ ಭಟ್ಟರಿಗೆ: ಶೀರೂರು ಸ್ವಾಮೀಜಿ ಪಕ್ಷೇತರರಾಗಿ ಸ್ಪರ್ಧೆ

Pinterest LinkedIn Tumblr

ಉಡುಪಿ: ಕುತೂಹಲ ಮೂಡಿಸಿದ್ದ ಉಡುಪಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿದ್ದು ಶುಕ್ರವಾರ ಸಂಜೆ ಬಿಜೆಪಿ ಬಿಡುಗಡೆಗೊಳಿಸಿರುವ ಮೂರನೇ ಪಟ್ಟಿಯಲ್ಲಿ ರಘುಪತಿ ಭಟ್ ಅವರಿಗೆ ಟಿಕೆಟ್ ಸಿಕ್ಕಿದೆ.

ಉಡುಪಿ ಕ್ಷೇತ್ರಕ್ಕೆ ಬಿಜೆಪಿಯಿಂದ ಸಮರ್ಥ ಅಭ್ಯರ್ಥಿ ಯಾರು ಹಾಗೂ ಟಿಕೆಟ್ ಯಾರಿಗೆ ಸಿಗುತ್ತೆಯೆಂಬುದು ಇಷ್ಟು ದಿನದ ಕುತೂಹಲವಾಗಿತ್ತು. ಮಾಜಿ ಶಾಸಕ ರಘುಪತಿ ಭಟ್ ಸಹಿತ ಹಲವರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ನಡುವೆಯೇ ಉಡುಪಿಯ ಸ್ವಾಮಿಜಿ ಶೀರೂರು ಮಠದ ಶ್ರೀಗಳು ತಾನು ರಾಜಕೀಯ ಪ್ರವೇಶದ ಬಾಂಬ್ ಸಿಡಿಸಿದ್ದು ಮಾತ್ರವಲ್ಲದೇ ತಾನು ಬಿಜೆಪಿ ಟಿಕೆಟ್ ಆಕಾಂಕ್ಷಿಯೆಂದು ಬಹಿರಂಗವಾಗಿಯೇ ಹೇಳಿದ್ದರು.

ಬಿಜೆಪಿ ಟಿಕೆಟ್ ಸಿದಗಿದಿದ್ದಲ್ಲಿ ಪಕ್ಷೇತರರಾಗಿಯೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದ ಸ್ವಾಮಿಜಿ ಬಿಜೆಪಿ ಟಿಕೆಟ್ ರಘುಪತಿ ಭಟ್ ಅವರಿಗೆ ಸಿಗುತ್ತಲೇ ತಾನು ಒಂದು ನಿರ್ಧಾರ ಘೋಷಿಸಿದ್ದಾರೆ. ಅವರು ಸದ್ಯ ರಾಜಕೀಯಕ್ಕೆ ಧುಮುಕಿ ಸ್ಪರ್ಧೆಗಿಳಿಯುವ ತಮ್ಮ ಹಿಂದಿನ ನಿರ್ಧಾರಕ್ಕೆ ಬದ್ಧರಾಗಿದ್ದು ಅಖಾಡಕ್ಕೆ ಇಳಿಯಲು ಸಜ್ಜಾಗಿದದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು ನಾಮಪತ್ರ ಸಲ್ಲಿಕೆ ಕಾರ್ಯ ಶನಿವಾರದಂದೇ ನಡೆಯಲಿದೆ.

Comments are closed.