ರಾಷ್ಟ್ರೀಯ

ಸ್ಕ್ರೂ ಡ್ರೈವರ್‌ನಿಂದ ಮಸೀದಿ ಸಿಬಂದಿ ಕೊಲೆ: 17ರ ಬಾಲಕನ ಬಂಧನ

Pinterest LinkedIn Tumblr


ಭೋಪಾಲ್‌ : ಮಸೀದಿಯಲ್ಲಿ ಪ್ರಾರ್ಥನೆಗೆ ಕರೆ ನೀಡುವ ಕೆಲಸ ಮಾಡಿಕೊಂಡಿದ್ದ 65ರ ಹರೆಯದ ಮುವಾಝಿನ್‌, ನಿಸಾರ್‌ ಅಹ್ಮದ್‌ ಎಂಬವರನ್ನು ಸ್ಕ್ರೂ ಡ್ರೈವರ್‌ನಿಂದ ಕೊಂದ 17 ವರ್ಷ ಪ್ರಾಯದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ತಾಲಿಯಾ ಪೊಲೀಸ್‌ ಠಾಣೆ ವ್ಯಾಪ್ತಿ ಪ್ರದೇಶದಲ್ಲಿ ನಿನ್ನೆ ಶುಕ್ರವಾರ ಈ ಘಟನೆ ನಡೆದಿದೆ. ಮೃತ ನಿಸಾರ್‌ ಅಹ್ಮದ್‌ ಅವರು ಇಲ್ಲಿನ ಅಖಾಡೆ ವಾಲಿ ಮಸೀದಿಯಲ್ಲಿ ಮುವಾಝಿನ್‌ ಆಗಿ ದುಡಿಯುತ್ತಿದ್ದರು. ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವುದಾಗಿ ಡಿಐಜಿ ಧರ್ಮೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

ಮೃತ ನಿಸಾರ್‌ ಅಹ್ಮದ್‌ ಅವರು ಮಸೀದಿ ಸಮೀಪ ಒಂದೆಡೆ ಬೆಂಚಿನಲ್ಲಿ ಕುಳಿತಿದ್ದಾಗ ಅವರ ಮೇಲೆ ಬಾಲಕನು ಸ್ಕ್ರೂ ಡ್ರೈವರ್‌ನಿಂದ ಹಲ್ಲೆ ನಡೆಸಿದ್ದಾನೆ. ಅಹ್ಮದ್‌ ಒಡನೆಯೇ ಮಸೀದಿ ಕಡೆಗೆ ಧಾವಿಸಿದಾಗ ಅವರು ಆವರಣದೊಳಗೆ ಕುಸಿದು ಬಿದ್ದರು ಎಂದು ಚೌಧರಿ ಹೇಳಿದರು.

-ಉದಯವಾಣಿ

Comments are closed.