ಕರಾವಳಿ

ಮನೆಯವರ ವಿರೋಧದ ನಡುವೆಯೇ ವಿಶೇಷ ಚೇತನ ಯುವಕನ ಕೈ ಹಿಡಿದ ಪದವಿಧರೆ!

Pinterest LinkedIn Tumblr

ಕುಂದಾಪುರ: ಇಬ್ಬರದ್ದು ಒಂದೂವರೆ ವರ್ಷದ ಪ್ರೀತಿ. ಮದುವೆಯಾಗೋ ಮಾತು ಬಂದಾಗ ಯುವತಿ ಮನೆಯವರು ನೋ ಅಂದ್ರು. ಆದರೇ ಯುವಕನನ ಮನೆಯಲ್ಲಿ ಪ್ರೀತಿಗೆ ಮದುವೆಗೆ ಅಸ್ತು ಸಿಕ್ಕಿತ್ತು. ಕೊನೆಗೂ ಯುವತಿ ಮನೆಯವರ ವಿರೋಧದ ನಡುವೆ ಸತಿಪತಿಗಳಾದ ಪ್ರೇಮಿಗಳಿಬ್ಬರ ಪ್ರೇಮ್ ಕಹಾನಿ ಇಲ್ಲಿದೆ.

ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ….ಎನ್ನುವ ಹಾಡು ಇಲ್ಲಿಗೆ ಪ್ರಸ್ತುತ ಅನ್ಸುತ್ತೆ. ಶೋಭನ್ ವೆಡ್ಸ್ ಸಂಗೀತಾ….ಇಬ್ರ ಹೆಸ್ರು ಎಷ್ಟು ಮ್ಯಾಚಿಂಗ್ ಆಗುತ್ತೋ ಹಾಗೆಯೇ ಇಬ್ಬರ ಪ್ರೀತಿಯೂ ಕೂಡ. ಸಮಾರಂಭವೊಂದರಲ್ಲಿ ಪರಿಚಯವಾದ ಇಬ್ಬ್ರು ಒಂದೂವರೆ ವರ್ಷ ಗಾಢವಾಗಿ ಪ್ರೀತಿಸಿದ್ರು. ಆದರೆ ಬೇರೆಲ್ಲಾ ಪ್ರೇಮಿಗಳಿಗೆ ಕಿರಿಕ್ ಮಾಡೋ ಜಾತಿ ಎಂಬ ಅಡ್ಡಗೋಡೆ ಇವರಿಬ್ಬರಿಗೆ ಯಾವ ಸಮಸ್ಯೆ ಕೊಟ್ಟಿಲ್ಲ, ಯಾಕೆಂದ್ರೆ ಈ ಜೋಡಿಗಳಿಬ್ಬರು ಒಂದೇ ಜಾತಿಯವರು. ಶೋಭನ್ ಮೊಗವೀರ ಮೂಲತಃ ಸಾಲಿಗ್ರಾಮದವರಾಗಿದ್ದು ಎಸ್‌.ಎಲ್‌.ಆರ್‌.ಎಂ. ಸಂಸ್ಥೆ ಉದ್ಯೋಗಿ. ಒಳ್ಳೆ ಕೆಲ್ಸ..ಬದುಕಿಗೆ ಬೇಕಾಗೋವಷ್ಟು ಸಂಬಳ. ಇಷ್ಟೆಲ್ಲಾ ಇದ್ರು ಕೂಡ ಸಂಗೀತಾ ಮನೆಯವರು ಮಾತ್ರ ಈ ಮದುವೆಗೆ ಅಡ್ಡಿಯಾದ್ರು. ಶೋಭನ್ ವಿಕಲಾಂಗ ಚೇತನ ಎನ್ನುವ ತಾತ್ಸಾರವೋ ಏನೋ ಗೊತ್ತಿಲ್ಲ. ಸಣ್ಣ ಪ್ರಮಾಣದಲ್ಲಿ ಒಂದು ಕಾಲಿನ ವಿಕಲತೆ ಕಾರಣದಿಂದ ಶೋಭನ್ ಜೊತೆ ಸಂಗೀತಾ ಮದುವೆಗೆ ಆಕೆ ಮನೆಯವರೇ ವಿಲನ್ ಆಗಿದ್ರು. ಆದ್ರು ಇಬ್ಬರ ಮದುವೆಗೆ ಕುಂದಾಪುರ ಸಾಂತ್ವಾನ ಕೇಂದ್ರ ಸಾಥ್ ನೀಡಿತ್ತು.

(ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್)

ಅಂದ ಹಾಗೆ ಶೋಭನ್ ಮನೆಯಲ್ಲಿ ಇಬ್ಬರ ಪ್ರೀತಿಗೆ ಸಪೋರ್ಟ್ ಸಿಕ್ಕಿದ್ದು ಸಂಗೀತಾ ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪ ಮಾಡಿದ್ರು. ಆದರೇ ಅವರು ಅದಕ್ಕೆ ಸುತರಾಂ ಒಪ್ಪಿರಲಿಲ್ಲ. ವರುಷಗಳ ಕಾಲ ಪ್ರೀತಿಸಿದ ಈ ಜೋಡಿ ತಮ್ಮ ಮದುವೆಗೆ ಅಡ್ಡಿಯಾಗುವ ಆತಂಕದಿಂದಲೇ ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಬಂದು ಹೆಲ್ಪ್ ಮಾಡಲು ರಿಕ್ವೆಸ್ಟ್ ಮಾಡ್ತಾರೆ. ಅದಕ್ಕೆ ಓಕೆ ಅಂದ ಸಾಂತ್ವಾನದ ಅಧ್ಯಕ್ಷೆ ರಾಧಾದಾಸ್ ಮದುವೆ ಮಾಡಿಸಲು ಒಪ್ಪುತ್ತಾರೆ. ಸೋಮವಾರ ಮಧ್ಯಾಹ್ನ ಸುಲಗ್ನ ಸುಮುಹೂರ್ತದಲ್ಲಿ ಇಬ್ಬರೂ ಸತಿಪತಿಗಳಾಗ್ತಾರೆ . ಬಿಕಾಂ ಪದವಿ ಪಡೆದಿರುವ ಸಂಗೀತಾ ಮನೆಯವರು ಮಾತ್ರ ಮದುವೆಗೆ ಬಾರದ ನೋವಿನಲ್ಲಿಯೂ ಕೂಡ ಇಷ್ಟ ಪಟ್ಟ ಹುಡುಗನ ಕೈಹಿಡಿದ ಸಂಭ್ರಮದಲ್ಲಿದ್ದರು. ಶೋಭನ್ ಪೋಷಕರು ಹಾಗೂ ಕುಟುಂಬಿಕರು ಮದುವೆಗೆ ಆಗಮಿಸಿ ದಂಪತಿಗಳಿಗೆ ಅಕ್ಷತೆ ಹಾಕಿ ಆಶಿರ್ವಾದ ಮಾಡಿದ್ರು. ಮಹಿಳಾ ಸಾಂತ್ವಾನ ಕೇಂದ್ರ ಅಧ್ಯಕ್ಷೆ ರಾಧಾದಾಸ್ ಮುಂದಾಳತ್ವದಲ್ಲಿ ನಡೆಯುತ್ತಿರುವ 124ನೇ ಮದುವೆ ಇದು ಅನ್ನೋದು ಮತ್ತೊಂದು ವಿಶೇಷ.

ಒಟ್ಟಿನಲ್ಲಿ ಒಂದೂವರೆ ವರ್ಷ ಪರಸ್ಪರ ಪ್ರೀತಿಸಿದ ಜೋಡಿಹಕ್ಕಿಗಳು ಸುಂದರ ಬಾಳಿನ ಕಲ್ಪನೆಯಿಟ್ಟುಕೊಂಡು ಸದ್ಯ ಹಸೆಮಣೆ ಏರಿದ್ದಾರೆ. ಈ ಪ್ರಣಯ ಪಕ್ಷಿಗಳಿಗೆ ಸಾಥ್ ನೀಡಿದ ಕುಂದಾಪುರ ಮಹಿಳಾ ಸಾಂತ್ವಾನ ಕೇಂದ್ರದ ಕಾರ್ಯವೂ ನಿಜಕ್ಕೂ ಮೆಚ್ಚುವಂತದ್ದು.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Comments are closed.