
ಎಚ್.ಡಿ.ಕೋಟೆ: ನಾಗರಹೊಳೆ ಹುಲಿ ರಕ್ಷಿತಾರಣ್ಯದ ಬಳ್ಳೆ ಶಿಬಿರದಲ್ಲಿ ಶನಿವಾರ ಒಂಟಿ ಸಲಗದ ದಾಳಿಯಿಂದ ಹುಲಿ ಯೋಜನೆ ನಿರ್ದೇಶಕ ಮಣಿಕಂಠನ್ ಅವರು ಮೃತಪಟ್ಟಿದ್ದಾರೆ.
ಎಚ್.ಡಿ.ಕೋಟೆ ತಾಲ್ಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಭಾಸ್ಕರ್ ಈ ವಿಷಯ ತಿಳಿಸಿದ್ದಾರೆ.

ಮಧ್ಯಾಹ್ನ 12.45ರ ಹೊತ್ತಿಗೆ ಬಳ್ಳೆ ವಲಯದಲ್ಲಿ ಸಿಬ್ಬಂದಿಯೊಂದಿಗೆ ಜೀಪಿನಲ್ಲಿ ತೆರಳುತ್ತಿದ್ದಾಗ ಆನೆ ದಾಳಿ ನಡೆಸಿದೆ. ಸಿಬ್ಬಂದಿ ಗುಂಡು ಹಾರಿಸಲು ಸಿದ್ಧತೆ ನಡೆಸುತ್ತಿರುವಷ್ಟರಲ್ಲಿ ಮಣಿಕಂಠನ್ ಅವರ ಎದೆಭಾಗ ಹಾಗೂ ತಲೆ ಭಾಗವನ್ನು ಸಲಗ ತುಳಿದು ಹಾಕಿತು ಎನ್ನಲಾಗಿದೆ.
ತಮಿಳುನಾಡು ಮೂಲದ 2001 ಎಎಫ್‍ಎಸ್ ಬ್ಯಾಚ್ ಅಧಿಕಾರಿಯಾಗಿದ್ದ ಮಣಿಕಂಠನ್ ಈ ಹಿಂದೆ ಹಲವು ಜಿಲ್ಲೆಗಳಲ್ಲಿ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಎರಡು ವರ್ಷಗಳಿಂದ ನಾಗರಹೊಳೆ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕರಾಗಿದ್ದರು.
Comments are closed.