ರಾಷ್ಟ್ರೀಯ

ತ್ರಿಪುರಾದಲ್ಲಿ 2013ರಲ್ಲಿ ಶೂನ್ಯ ಸಾಧಿಸಿದ್ದ ಬಿಜೆಪಿಯಿಂದ 2018ರಲ್ಲಿ ಸರ್ಕಾರ ರಚನೆ!

Pinterest LinkedIn Tumblr

ಅಗರ್ತಲಾ: ತ್ರಿಪುರದಲ್ಲಿ 2013 ರ ವಿಧಾನಸಭಾ ಚುನಾವಣಾ ಫ‌ಲಿತಾಂಶ ಬಂದಾಗ ಬಿಜೆಪಿಯದ್ದು ಶೂನ್ಯ ಸಂಪಾದನೆ ಆದರೆ 5 ವರ್ಷಗಳ ಬಳಿಕ ಇಂದು ಶನಿವಾರ ಪ್ರಕಟವಾದ ಫ‌ಲಿತಾಂಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಕೆಂಪು ಕೋಟೆಯಲ್ಲಿ ಕೇಸರಿ ಪತಾಕೆ ಹಾರಿಸಿದೆ.

25 ವರ್ಷಗಳಿಂದ ಆಡಳಿತ ನಡೆಸುತ್ತಿದ್ದ ಸಿಪಿಐ(ಎಂ)ಗೆ ಭಾರೀ ಆಘಾತ ನೀಡಿರುವ ಬಿಜೆಪಿ ದೇಶದ ಅತೀ ಬಡ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಾಣಿಕ್‌ ಸರ್ಕಾರ್‌ ಅವರ ನಿರಂತರ ಆಡಳಿತಕ್ಕೆ ಅಂತ್ಯ ಹಾಡುವಲ್ಲಿ ಯಶಸ್ವಿಯಾಗಿದೆ.

59 ಸ್ಥಾನಗಳ ಪೈಕಿ ಬಿಜೆಪಿ 41 ಸ್ಥಾನಗಳನ್ನು ಜಯಿಸುವ ಮೂಲಕ ಭರ್ಜರಿ ಬಹುಮತ ಪಡೆದಿದೆ. ಆಡಳಿತದಲ್ಲಿದ್ದ ಎಡಪಕ್ಷ 18 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡರೆ ಕಾಂಗ್ರೆಸ್‌ನದ್ದು ಶೂನ್ಯ ಸಂಪಾದನೆ. 2013 ರಲ್ಲಿ ಎಡಪಕ್ಷಗಳ ಮೈತ್ರಿಕೂಟ 49 ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್‌ 10 ಸ್ಥಾನಗಳನ್ನು ಗೆದ್ದಿತ್ತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 4 ಚುನವಣಾ ಪ್ರಚಾರ ಸಮಾವೇಶಗಳಲ್ಲಿ ಪಾಲ್ಗೊಂಡು ಮಾಣಿಕ್‌ ಸರ್ಕಾರದ ಬದಲಿಗೆ ಬಿಜೆಪಿಗೆ ಮತ ನೀಡಿ, ಹೊಸ ತ್ರಿಪುರಾ ನೋಡಿ ಎಂದು ಮೋಡಿ ಮಾಡಿದ್ದರು.

ಬಿಜೆಪಿಯಿಂದ 48 ರ ಹರೆಯದ ಶಾಸಕ ಬಿಪ್‌ಲಾಬ್‌ ಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ತ್ರಿಪುರಾದಲ್ಲಿ 60 ಸ್ಥಾನಗಳಿದ್ದು 1 ಕ್ಷೇತ್ರದ ಅಭ್ಯರ್ಥಿ ನಿಧನ ಹೊಂದಿದ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ.

Comments are closed.