ಪ್ರಮುಖ ವರದಿಗಳು

ಮೋದಿಯ ಐಶಾರಾಮಿ ಬಟ್ಟೆಗಳಿಗೆ ಯಾರು ಹಣ ಖರ್ಚು ಮಾಡುತ್ತಿರುವುದು…? ಇಲ್ಲಿದೆ ಉತ್ತರ….

Pinterest LinkedIn Tumblr

ನವದೆಹಲಿ: ಈ ಹಿಂದೆ ಸಾಕಷ್ಟು ಸುದ್ದಿ ಮಾಡುತ್ತಿದ್ದ ಪ್ರಧಾನಿ ಮೋದಿ ಅವರ ಐಶಾರಾಮಿ ಬಟ್ಟೆಗಳಿಗೆ ಕೇಂದ್ರ ಸರ್ಕಾರ ಹಣ ಖರ್ಚು ಮಾಡುತ್ತಿಲ್ಲ..ಬದಲಿಗೆ ನರೇಂದ್ರ ಮೋದಿ ಅವರೇ ತಮ್ಮ ಬಟ್ಟೆಯ ವೆಚ್ಚವನ್ನು ಭರಿಸುತ್ತಿದ್ದಾರೆ ಎಂದು ಆರ್ ಟಿಐ ಮೂಲಕ ತಿಳಿದುಬಂದಿದೆ.

ಆರ್ ಟಿಐ ಕಾರ್ಯಕರ್ತ ರೋಹಿತ್ ಸಭರ್ವಾಲ್ ಎಂಬುವವರು ಸಲ್ಲಿಕೆ ಮಾಡಿದ್ದ ಮಾಹಿತಿ ಹಕ್ಕು ಕಾಯ್ಗೆಯಿಂದ ಈ ಮಾಹಿತಿ ತಿಳಿದುಬಂದಿದ್ದು, ಪ್ರಧಾನಿ ಮೋದಿ ತಮ್ಮ ಖರ್ಚಿನಲ್ಲೇ ತಾವು ಧರಿಸುವ ಬಚ್ಚೆಗಳಿಗೆ ಹಣ ವ್ಯಯಿಸುತ್ತಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಯಾವುದೇ ರೀತಿಯ ಹಣ ಖರ್ಚು ಮಾಡುತ್ತಿಲ್ಲ ಎಂದು ಮಾಹಿತಿ ಹಕ್ಕು ಕಾಯ್ಗೆಯಿಂದ ತಿಳಿದುಬಂದಿದೆ. ಆರ್ ಟಿಐ ಕಾರ್ಯಕರ್ತ ರೋಹಿತ್ ಸಭರ್ವಾಲ್ ಅವರು, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸುತ್ತಿದ್ದ ಬಟ್ಟೆಗಳಿಗೆ ಹಣ ವ್ಯಯದ ಕುರಿತು ಮಾಹಿತಿ ಕೇಳಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನಿ ಕಾರ್ಯಾಲಯ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಅವರೂ ಸೇರಿದಂತೆ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಟ್ಟೆಗಳಿಗೆ ಕೇಂದ್ರ ಸರ್ಕಾರ ಖರ್ಚು ಮಾಡಿಲ್ಲ. ಬದಲಿಗೆ ಅವರೇ ತಮ್ಮ ತಮ್ಮ ಸ್ವಂತಹಣದಲ್ಲಿ ಬಟ್ಟೆಗಳಿಗೆ ವ್ಯಯಿಸಿದ್ದಾರೆ ಎಂದು ಹೇಳಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆರ್ ಟಿಐ ಕಾರ್ಯಕರ್ತ ರೋಹಿತ್ ಸಭರ್ವಾಲ್ ಅವರು, ಪ್ರಧಾನಿಗಳ ಬಟ್ಟೆಯ ವಿಚಾರಕ್ಕೆ ಸಂಬಂಧಿಸಿದಂತೆ ಜನ ಸಾಮಾನ್ಯರಲ್ಲಿ ತಪ್ಪು ಮಾಹಿತಿ ಪ್ರಸಾರವಾಗುತ್ತಿದೆ. ಅವರ ಐಶಾರಾಮಿ ಬಟ್ಟೆಗಳಿಗೆ ಸರ್ಕಾರವೇ ಹಣ ವ್ಯಯಿಸುತ್ತಿದೆ ಎಂಬೆಲ್ಲ ಶಂಕೆ ಇತ್ತು. ಹೀಗಾಗಿ ಈ ಬಗ್ಗೆ ಸ್ಪಷ್ಟ ಮಾಹಿತಿಗಾಗಿ ನಾನು ಅರ್ಜಿ ಸಲ್ಲಿಕೆ ಮಾಡಿದ್ದೆ. ಈ ಮೂಲಕ ದೇಶದ ಜನರಿಗೆ ಸತ್ಯದ ದರ್ಶನವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಭಾರತಕ್ಕೆ ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರ ಆಗಮಿಸಿದ್ದಾಗ ಪ್ರಧಾನಿ ಮೋದಿ ಧರಿಸಿದ್ದ ಕೋಟ್ ಭಾರಿ ಸದ್ದು ಮಾಡಿತ್ತು, ಆ ಕೋಟ್ ಗಾಗಿ ಮೋದಿ ಲಕ್ಷಾಂತರ ಸರ್ಕಾರಿ ಹಣವನ್ನು ವ್ಯಯಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಅಲ್ಲದೆ ಈ ಕೋಟ್ ಸಂಬಂಧ ಅಂದಿನ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಕೂಡ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ಮೋದಿ ತಮ್ಮ ಬಟ್ಟೆಗಳಿಗಾಗಿಯೇ 10 ಲಕ್ಷ ವ್ಯಯಿಸುತ್ತಾರೆ ಎಂದು ಆರೋಪಿಸಿದ್ದರು.

Comments are closed.