ಕರಾವಳಿ

ಬಿಜೆಪಿ ಓಬಿಸಿ ಉಡುಪಿ ಜಿಲ್ಲಾಧ್ಯಕ್ಷ ಹುದ್ದೆಯಿಂದ ರಾಜೇಶ್ ಕಾವೇರಿಗೆ ಗೇಟ್ ಪಾಸ್!

Pinterest LinkedIn Tumblr

ಉಡುಪಿ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಉಡುಪಿ ಜಿಲ್ಲಾಧ್ಯಕ್ಷ ರಾಜೇಶ್ ಕಾವೇರಿ ಅವರನ್ನು ಹುದ್ದೆಯಿಂದ ವಿಮುಕ್ತಗೊಳಿಸಿ ಆದೇಶ ಮಾಡಲಾಗಿದೆ ಎನ್ನಲಾಗಿದೆ.

ಇತ್ತೀಚಿನ ಕೆಲ ರಾಜಕೀಯ ಬೆಳವಣಿಗೆಯ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು ಬಿಜೆಪಿಯ ಕೆಲ ಜಿಲ್ಲಾ ನಾಯಕರು, ಸಂಘ ಪರಿವಾರದ ಪ್ರಮುಖರು ರಾಜೇಶ್ ಕಾವೇರಿಯನ್ನು ಹುದ್ದೆಯಿಂದ ಅಮಾನತು ಮಾಡದಂತೆ ಒತ್ತಡ ತಂದರೂ ಕೂಡ ಈ ಆದೇಶ ಹೊರಬಿದ್ದಿದೆ ಎನ್ನಲಾಗುತ್ತಿದೆ.

ಈ ದಿಢೀರ್ ನಿರ್ಧಾರ ಪಕ್ಷದಲ್ಲಿ ಹಾಗೂ ಕಾರ್ಯರ್ತರಲ್ಲಿ ಒಂದಷ್ಟು ಗೊಂದಲ ಮೂಡಿಸಿದ್ದು ಮುಂದಿನ ಬೆಳವಣಿಗೆ ಕಾದು ನೋಡಬೇಕಿದೆ.

ಈ ಕುರಿತು ಪ್ರತಿಕ್ರಿಯಿಸಿದ ರಾಜೇಶ್ ಕಾವೇರಿ, ಇನ್ನೂ ನನಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಬಂದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡುವೆ. ಕುಂದಾಪುರ ಬಿಜೆಪಿಯು ಕೃಪಾಪೋಷಿತ ಯಕ್ಷಗಾನ ಮಂಡಳಿಯಂತಾಗಿದ್ದು ಹೊರಗಿನವರ ಆಟಕ್ಕೆ ಕುಣಿಯುವ ಕೆಲವಾರು ಕಲಾವಿದರು ಒಳಗಡೆಯಿದ್ದಾರೆ ಎಂಬ ಅನುಮಾನವಿದೆ. ಅಟಲ್ ಬಿಹಾರಿ ವಾಜಪೆಯಿ, ಡಾ. ವಿ.ಎಸ್. ಆಚಾರ್ಯ ಅವರು ಹಾಕಿಕೊಟ್ಟ ನೆಲೆಯಲ್ಲಿ ಬಿಜೆಪಿಯಲ್ಲಿ ಕೆಲಸ ಮಾಡುತ್ತಿರುವೆ ಹೊರತು ಹುದ್ದೆಗೆ ಆಕಾಂಕ್ಷಿಯಾಗಿ ಕೆಲಸ ಮಾಡುತ್ತಿಲ್ಲ. ಈ ಹುದ್ದೆ ಇಲ್ಲದಿದ್ದರೂ ನಾನು ಭಾ.ಜ.ಪಾ ಕಾರ್ಯಕರ್ತನಾಗಿಯೇ ಇದ್ದು ನಿಷ್ಟೆಯಿಂದೆ ದುಡಿಯುವುದು ಮಾತ್ರವಲ್ಲದೇ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ. ನಾನು ಈ ಹಿಂದೆ ಕ್ಷೇತ್ರಾಧ್ಯಕ್ಷನಾಗಿದ್ದು ನನ್ನ ಕಾರ್ಯವೈಖರಿ ನೋಡಿ ನನಗೆ ಹುದ್ದೆ ನೀಡಿದ್ದರು. ಹುದ್ದೆ ಪಡೆದ ಬಳಿಕ ಬಡವರ ನೊಂದವರ ಪರವಾಗಿ ನಿರಂತರ ಹೋರಾಟ ಮಾಡಿದ್ದೇನೆ. ರಾಜ್ಯದಲ್ಲಿ ಎಲ್ಲಿಯೂ ಓಬಿಸಿ ಇಂತಹ ಕಾರ್ಯ ಮಾಡಿಲ್ಲ. ಇದಕ್ಕಿಂತ ಜಾಸ್ಥಿ ಒತ್ತಡ ಬಂದರೇ ಏನು ಮಾಡಲಾಗದು. ಸಮುದ್ರ ಮಥನ ಕಾಲದಲ್ಲಿ ಮೊದಲು ಬಂದಿದ್ದು ವಿಷ ಬಳಿಕ ಆಮೇಲೆ ಅಮೃತ ಬಂದಿದ್ದು, ನಮ್ಮ ದಿನವೂ ಮುಂದೆ ಬರಲಿದೆ ಎಂಬ ಆಶಯ ನನ್ನದು ಎಂದರು.

ಸುಂದರ ಕುಂದಾಪುರದ ಕನಸು ಸಾಕಾರಗೊಳ್ಳಲು ಬೇಕಾದ ಪ್ರಯತ್ನ ನಮ್ಮದು. ಕ್ಷೇತ್ರದಲ್ಲಿ ಯಾವುದೇ ನ್ಯೂನ್ಯತೆಗಳಿಲ್ಲದೇ ಅಭಿವೃದ್ಧಿ ನಡೆಯಬೇಕೆಂಬ ಸತತ ಹೋರಾಟ ಮಾಡುತ್ತಿದ್ದು ಮುಂದೆಯೂ ಅದು ಮುಂದುವರಿಯಲಿದೆ ಎಂದರು. ಇನ್ನು ವಾಟ್ಸಾಪ್ ಜಾಲತಾಣದಲ್ಲಿ ಶೋಭಾ ಕರಂದ್ಲಾಜೆ ಅವಹೇಳನದ ಫೋಟೋ ರವಾನೆಯ ಪ್ರಕರಣದಲ್ಲಿಯೂ ನಮ್ಮನ್ನು ಸುಖಾ ಸುಮ್ಮನೇ ಫಿಕ್ಸ್ ಮಾಡಲಾಗಿದೆ. ಈ ಬಗ್ಗೆ ತಮಿಖೆಗೆ ಸಹಕಾರ ನೀಡಿದ್ದು ವಿಧಿ ವಿಜ್ಞಾನ ಪ್ರಯೋಗಾಲಯಕೆ ನಮ್ಮ ಮೊಬೈಲ್ ನೋಡಿದ್ದು ಅಲ್ಲಿ ನಿಸ್ಪಕ್ಷಪಾತ ತನಿಖೆ ನಡೆಯುವ ಭರವಸೆ ಇದೆ ಎಂದರು.

Comments are closed.