ಕರ್ನಾಟಕ

‘ಕೈ ಕೊಟ್ಟ ವಾಟ್ಸಪ್’: ಒಂದು ಗಂಟೆ ಜಗತ್ತಿನ ಹಲೆವೆಡೆ ವಾಟ್ಸಪ್ ಸೇವೆ ಬಂದ್!

Pinterest LinkedIn Tumblr

ಬೆಂಗಳೂರು: ಜನರ ಜೀವನದಲ್ಲಿ ಬಿಡಲಾರದಷ್ಟು ನಂಟು ಹೊಂದಿರುವ ಪ್ರಮುಖ ಜಾಲತಾಣಗಳಲ್ಲಿ ಒಂದಾದ ವಾಟ್ಸಪ್ (WhatsApp) ವಿಶ್ವದ ಬಹುತೇಕ ಭಾಗಗಳಲ್ಲಿ ಒಂದು ಗಂಟೆಗಳ ಕಾಲ ಸ್ಥಗಿತಗೊಂಡಿದ್ದು ಬಳಕೆದಾರರು ತಲೆಕೆಡಿಸಿಕೊಳ್ಳುವಂತಾಗಿತ್ತು.

ಭಾರತ, ಅಮೆರಿಕಾ ಮೊದಲಾದ ದೇಶಗಳನ್ನು ಸೇರಿದಂತೆ ವಿಶ್ವದ ಬಹುತೇಕ ಕಡೇಗಳಲ್ಲಿ ವಾಟ್ಸಪ್ ಸೇವೆ ಸ್ಥಗಿತಗೊಂಡಿದ್ದು ತಾಂತ್ರಿಕ ಕಾರಣಗಳಿಂದಾಗಿ ಈ ಸಮಸ್ಯೆ ಕಾಡಿದೆ ಎನ್ನಲಾಗಿದೆ. ಸರ್ವರ್ ಸಮಸ್ಯೆ ಬಳಕೆದಾರರಿಗೆ ಒಂದಷ್ಟು ಗೊಂದಲವನ್ನುಂಟೂ ಮಾಡಿತ್ತು.

ಹಲವು ಬಳಕೆದಾರರು ಇಂಟರ್ನೆಟ್ ಸಮಸ್ಯೆಯೆಂದುಕೊಂಡರೆ ಇನ್ನು ಹಲವರು ಮೊಬೈಲ್ ‘ರಿಸ್ಟಾರ್ಟ್’ ಮಾಡಿದ್ದರು. ಇನ್ನು ಹಲವರು ಮೊಬೈಲ್ ಅಂಗಡಿಗಳಿಗೆ ಸ್ನೇಹಿತರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ತಿಳಿದುಕೊಂಡರು. ಶುಕ್ರವಾರ ಮಧ್ಯಾಹ್ನ ಈ ಸಮಸ್ಯೆ ತಲೆದೋರಿದ್ದು ಮಧ್ಯಾಹ್ನ 2.35ಕ್ಕೆ ವಾಟ್ಸಾಪ್ ಮರಳಿ ಸೇವೆಗೆ ಲಭ್ಯವಾಗಿದೆ.

Comments are closed.