ಪ್ರಮುಖ ವರದಿಗಳು

ನಿಶ್ಚಿತಾರ್ಥ ಕೈತಪ್ಪುತ್ತೆ ಎಂಬ ಕಾರಣಕ್ಕೆ ವಿಮಾನವನ್ನು ನಿಲ್ಲಿಸಲು ಜೋಡಿ ಮಾಡಿದ ಉಪಾಯವೇನು ಗೊತ್ತಾ…? ಕೊನೆಗೆ ಜೋಡಿ ಸೇರಿದ್ದು ಎಲ್ಲಿಗೆ…!

Pinterest LinkedIn Tumblr

ಬೆಂಗಳೂರು: ವಿಮಾನ ನಿಲ್ದಾಣಕ್ಕೆ ತಡವಾಗಿ ತಲುಪಿದ ಜೋಡಿ ಹುಸಿ ಬಾಂಬ್ ಕರೆ ಮಾಡಿದ್ದರಿಂದ ಬೆಂಗಳೂರಿನಿಂದ ಕೊಚ್ಚಿಗೆ ಹೋಗಬೇಕಿದ್ದ ಏರ್ ಏಷಿಯಾ ವಿಮಾನ ಸುಮಾರು 6 ಗಂಟೆ ತಡವಾಗಿ ಹೊರಟಿತು.

ನಡೆದ ಘಟನೆ: ಮೊನ್ನೆ ಬುಧವಾರ ರಾತ್ರಿ 8.45ಕ್ಕೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರ್ ಏಷಿಯಾ ಐ5 1129 ಕೊಚ್ಚಿಗೆ ಹೊರಡಬೇಕಿತ್ತು. ಬೆಂಗಳೂರಿನ ಬಿಟಿಎಂ ಲೇ ಔಟ್ ನ ಕೇರಳ ಮೂಲದ ನೇಹಾ ಗೋಪಿನಾಥ್ ಮತ್ತು ಅರ್ಜುನ್ ಅವರು ಮರುದಿನ ತಮ್ಮ ನಿಶ್ಚಿತಾರ್ಥಕ್ಕೆಂದು ಹೊರಟಿದ್ದರು.

ಆದರೆ ನಗರದಲ್ಲಿ ಟ್ರಾಫಿಕ್ ಮಧ್ಯೆ ಸಿಕ್ಕಿಹಾಕಿಕೊಂಡು ನಿಗದಿತ ಸಮಯಕ್ಕೆ ವಿಮಾನ ನಿಲ್ದಾಣಕ್ಕೆ ತಲುಪಲಿಲ್ಲ. ವಿಮಾನವನ್ನು ತಡವಾಗಿ ಬಿಡುವಂತೆ ಅಧಿಕಾರಿಗಳಿಗೆ ಫೋನ್ ಮಾಡಿ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಅದಕ್ಕೆ ಒಪ್ಪಲಿಲ್ಲ.

ಈ ಜೋಡಿ ಕೊನೆಗೆ ವಿಮಾನ ನಿಲ್ದಾಣ ತಲುಪುವಾಗ ರಾತ್ರಿ 8 ಗಂಟೆ 59 ನಿಮಿಷವಾಗಿತ್ತು. ಅದಕ್ಕೆ ಮೊದಲು ಉಪಾಯ ಮಾಡಿದ ಜೋಡಿ 8.30ರ ಸುಮಾರಿಗೆ ವಿಮಾನ ನಿಲ್ಜಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದರು.

ಬಾಂಬ್ ಇಟ್ಟಿರುವ ಕರೆ ಬಂದಾಗ ವಿಮಾನದಲ್ಲಿದ್ದ ಎಲ್ಲಾ 180 ಪ್ರಯಾಣಿಕರ ಲಗ್ಗೇಜುಗಳನ್ ನು ಮತ್ತೆ ತಪಾಸಣೆ ಮಾಡಲಾಯಿತು. ಕೊನೆಗೆ ವಿಮಾನ ಕೊಚ್ಚಿಗೆ ಹೊರಟಿದ್ದು ಮರುದಿನ ಮುಂಜಾನೆ 3.30ಕ್ಕೆ. ಆ ಮೇಲೆ ಅಧಿಕಾರಿಗಳಿಗೆ ಅದು ಹುಸಿ ಬಾಂಬ್ ಕರೆ ಎಂದು ಗೊತ್ತಾಯಿತು.

ಪ್ರಾಥಮಿಕ ತನಿಖೆ ನಡೆಸಿದಾಗ ಅರ್ಜುನ್ ಮತ್ತು ನೇಹಾ ಮೇಲೆ ಸಂಶಯ ಮೂಡಿತು. ಸಂಶಯ ಬಂದು ಅವರನ್ನು ವಿಚಾರಣೆ ನಡೆಸಿದಾಗ ಜೋಡಿ ತಮ್ಮ ನಿಶ್ಚಯಕ್ಕೆ ಆಲಪ್ಪುರದ ಮಾವೆಲಿಕ್ಕಾರಕ್ಕೆ ಹೋಗುತ್ತಿದ್ದು ವಿಮಾನ ತಡವಾಗಿ ಹೊರಡಲು ಹುಸಿ ಬಾಂಬ್ ಕರೆಯನ್ನು ಅವರೇ ಮಾಡಿದರು ಎಂದು ತಿಳಿದುಬಂತು.

ನಿನ್ನೆ ಕೇರಳದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಾಗಿದ್ದ ಜೋಡಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

Comments are closed.