ರಾಷ್ಟ್ರೀಯ

ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ರವಾನಿಸುತ್ತಿದ್ದ ಬಿಜೆಪಿ ನಾಯಕನ ಸಂಬಂಧಿ ಸೇರಿದಂತೆ 11 ಗೂಢಚಾರರ ಬಂಧನ

Pinterest LinkedIn Tumblr

ಭೋಪಾಲ: ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ರವಾನಿಸುತ್ತಿದ್ದ 11 ಗೂಢಚಾರರನ್ನು ಮಧ್ಯಪ್ರದೇಶ ಭಯೋತ್ಪಾದನೆ ನಿಗ್ರಹ ದಳ ಗುರುವಾರ ಬಂಧಿಸಿದೆ. ವಿಶೇಷವೆಂದರೆ ಈ ಗೂಢಚಾರರಲ್ಲಿ ಬಿಜೆಪಿ ಕಾರ್ಪೋರೇಟರ್ ಒಬ್ಬರ ಮೈದುನ ಇದ್ದಾನೆ.

ಇದರ ಬೆನ್ನಲ್ಲೇ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್, ‘ಬಂಧಿತರಲ್ಲಿ ಯಾರೂ ಮುಸ್ಲಿಮರಿಲ್ಲ. ಓರ್ವ ವ್ಯಕ್ತಿ ಬಿಜೆಪಿ ಸದಸ್ಯ. ಇದನ್ನು ಬಿಜೆಪಿಗರು ಅರಿಯಲಿ’ ಎಂದಿದ್ದಾರೆ. ಆದರೆ ಬಂಧಿತನು ಬಿಜೆಪಿ ಕಾರ್ಯಕರ್ತನಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ.

ಬಂತರು ಚೀನಾದ ಉಪಕರಣಗಳು ಮತ್ತು ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಕಾಲ್ ಸೆಂಟರ್‌ಗಳನ್ನು ನಡೆಸುತ್ತಿದ್ದರು. ಭಾರತದ ಮಿಲಿಟರಿ ಕಾರ್ಯಾಚರಣೆಯ ಕುರಿತಂತೆ ಬೇಹುಗಾರಿಕೆ ನಡೆಸಿ ಮಾಹಿತಿಯನ್ನು ಐಎಸ್‌ಐಗೆ ರವಾನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಮೂವರು ಆರೋಪಿಗಳನ್ನು ಭೋಪಾಲ್, ಒಬ್ಬನನ್ನು ಸತ್ನಾದಲ್ಲಿ, ಇಬ್ಬನನ್ನು ಜಬಲ್ಪುರ ಮತ್ತು ಐದು ಮಂದಿಯನ್ನು ಗ್ವಾಲಿಯರ್‌ದಲ್ಲಿ ಬಂಸಲಾಗಿದೆ.

ಸತ್ನಾದಲ್ಲಿ ಬಂಧಿತನಾದ ಬಲರಾಮ್ ಎಂಬಾತ ಈ ದಂಧೆಯ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ. ಬಂಧಿತರಿಂದ ಚೀನಾದ ಸಲಕರಣೆಗಳು, ಸಿಮ್ ಬಾಕ್ಸ್‌ಗಳು, ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಡಾಟಾ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಟೆಲಿಗ್ರ್’ಮ್ ಕಾಯ್ದೆ, ಭಾರತೀಯ ದಂಡ ಸಹಿತೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಟಿಎಸ್ ಮುಖ್ಯಸ್ಥ ಶಮಿ ತಿಳಿಸಿದ್ದಾರೆ.

Comments are closed.