
ಮೈಸೂರು: ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಮೈಸೂರಿನ ಡೇವಿಡ್ ಅನೋಕ್ ಹಾಗೂ ಚೀನಾದ ವಾಂಗ್ ಟಾಂಗ್ ಗುರುವಾರ ವಿವಾಹವಾದರು.
ವಧು ಮತ್ತು ವರನ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಚರ್ಚ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್‌ನಲ್ಲಿ ಆರತಕ್ಷತೆ ನಡೆಯಲಿದೆ.
ನಾಯ್ಡು ನಗರದ ಡೇವಿಡ್ ಅವರು ಚೀನಾದ ಸೈಲೆಂಟ್ ಓಜಾನ್ ಶಿಪ್ಪಿಂಗ್ ಕಂಪೆನಿಯಯಲ್ಲಿ 2011ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದೇ ಕಂಪೆನಿಯಲ್ಲಿ ವಾಂಗ್ ಟಾಂಗ್ ಕೆಲಸ ಮಾಡುತ್ತಿದ್ದಾರೆ. ಇಬ್ಬರ ನಡುವೆ 2012ರಲ್ಲಿ ಪ್ರೇಮಾಂಕುರವಾಗಿದೆ. ಎರಡೂ ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದ ಜೋಡಿ ನವ ದಾಂಪತ್ಯಕ್ಕೆ ಕಾಲಿಟ್ಟಿದೆ.
Comments are closed.