ಅಂತರಾಷ್ಟ್ರೀಯ

ಪ್ರತಿಷ್ಠಿತ ಫೋರ್ಬ್ಸ್‌ ನಿಯತಕಾಲಿಕೆಯ ವಾರ್ಷಿಕ 30 ಜನರ ಪಟ್ಟಿಯಲ್ಲಿ ಸ್ಥಾನ ಪಡೆದ ದೇಶದ ಮೂವರು ಐಐಟಿ ಪದವೀಧರರು

Pinterest LinkedIn Tumblr

ನವದೆಹಲಿ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಐಐಟಿ) ಕಾನ್ಪುರದ ಮೂವರು ಹಳೆಯ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಫೋರ್ಬ್ಸ್‌ ನಿಯತಕಾಲಿಕೆಯ ವಾರ್ಷಿಕ 30 ಜನರ ಪಟ್ಟಿಯಲ್ಲಿ ಸ್ಥಾನ ದೊರಕಿದೆ.

ಫೆಬ್ರುವರಿ ತಿಂಗಳ ನಿಯತಕಾಲಿಕೆಯಲ್ಲಿ ಪ್ರಕಟವಾಗಲಿರುವ ಪಟ್ಟಿಯಲ್ಲಿ 2017 ನೇ ಸಾಲಿನ ವಿಶ್ವದ 30 ಪ್ರಾಯದ ಒಳಗಿನ 30 ಜನ ಸಾಧಕರ ಪಟ್ಟಿಯಲ್ಲಿ ಭಾರತದ ಮೂವರು ಐಐಟಿಗರು ಸ್ಥಾನ ಪಡೆದಿರುವುದು ವಿಶೇಷ.

ಲಖನೌದ ಫರಿದ್‌ ಅಹಸಾನ್‌ (24), ಗೋರಖ್‌ಪುರದ ಭಾನು ಪ್ರತಾಪ್‌ ಸಿಂಗ್‌ (25), ಗಾಜಿಯಾಬಾದಿನ ಅಂಕುಶ್‌ ಸಚದೇವ್‌(23) ಅವರು ಸಾಮಾಜಿಕ ಜಾಲತಾಣದಲ್ಲಿ ‘ಶೇರ್‌ಚಾಟ್‌’ ಎಂಬ ಆ್ಯಪ್‌ ಅಭಿವೃದ್ಧಿಪಡಿಸಿದ್ದರು. ವಿಶೇಷ ಎಂದರೆ ಇಂಗ್ಲೀಷ್‌ ಭಾಷೆ ಕಷ್ಟ ಎನಿಸಿದವರಿಗಾಗಿ ಸ್ಥಳೀಯ ಭಾಷೆಯಲ್ಲಿ ಮಾಹಿತಿ ವಿನಿಮಯಕ್ಕೆ ಆ್ಯಪ್‌ ಸಹಕಾರಿಯಾಗಿದೆ.

ವಿಶ್ವದ ವಿವಿಧ ಕ್ಷೇತ್ರದ ಯುವ ಸಾಧಕರನ್ನು ಗುರುತಿಸುವ ಫೋರ್ಬ್ಸ್‌ ನಿಯತಕಾಲಿಕೆ, ಅವರನ್ನು ಜಾಗತಿಕವಾಗಿ ಪರಿಚಯಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದೆ. ಮೊಬೈಲ್‌ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಈ ಮೂವರನ್ನು ಆಯ್ಕೆ ಮಾಡಲಾಗಿದೆ.

Comments are closed.