ಪ್ರಮುಖ ವರದಿಗಳು

ಬಿಗ್‌ಬಾಸ್‌ನಲ್ಲಿ ಹೊಸ ಟ್ವಿಸ್ಟ್ …ಶಾಕ್! ಪ್ರಥಮ್‌-ಮಾಳವಿಕ ಔಟ್ ! ಹೊರಬಂದವರು ಹೋದದ್ದು ಎಲ್ಲಿಗೆ…?

Pinterest LinkedIn Tumblr

ಬೆಂಗಳೂರು: ಕನ್ನಡ ಬಿಗ್‌ಬಾಸ್‌ ಈ ವಾರ ಒಂದೆಡೆ ಶಾಕ್ ನೀಡಿದರೆ, ಇನ್ನೊಂದೆಡೆ ಹೊಸ ಟ್ವಿಸ್ಟನ್ನು ಮುಂದಿಟ್ಟಿದೆ. ಈ ವಾರ ಬಿಗ್‌ಬಾಸ್‌ನಿಂದ ‘ಒಳ್ಳೆ ಹುಡುಗ’ ಪ್ರಥಮ್‌-ಮಾಳವಿಕ ಹೊರಬಿದ್ದಿದ್ದಾರೆ. ಆದರೆ ಹೊರಬಂದವರು ಹೋದದ್ದು ಎಲ್ಲಿಗೆ…?

ಬಿಗ್‌ಬಾಸ್‌ ಸೀಸನ್‌-4 ಆ ಬಾರಿ 100ದಿನಗಳ ಕಾಲ ನಡೆಯುವುದಲ್ಲ. ಬದಲಾಗಿ 115 ದಿನ ನಡೆಯಲಿದೆ ಅನ್ನೋದು ಒಂದು ಟ್ವಿಸ್ಟ್ ಆದರೆ ಇನ್ನೊಂದು ಬಿಗ್‌ಬಾಸ್‌ನ ಬಲಿಷ್ಠ ಸ್ಪರ್ಧಿ ಎಂದೇ ಗುರುತಿಸಲಾಗುತ್ತಿದ್ದ ಪ್ರಥಮ್ ಹಾಗು ಮಾಳವಿಕಾ ಔಟ್ ಆಗಿದ್ದು, ಎಲ್ಲರಿಗೆ ಶಾಕ್ ನೀಡಿದೆ.

‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಸುದೀಪ್ ಈ ಶಾಕ್ ನೀಡಿ ಮನೆಮಂದಿಯನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದರು. ಈ ವಾರದ ಎಲಿಮಿನೇಶನ್‌ನಿಂದ ಭುವನ್‌ ಹಾಗೂ ಕೀರ್ತಿ ಸೇಫ್‌ ಆದರು. ಇದಕ್ಕೂ ಮೊದಲು ಸುದೀಪ್ ಟ್ವಿಸ್ಟ್ ಬಗ್ಗೆ ಎಲ್ಲರಿಗೂ ತಿಳಿಸಿದರು.

ಬಿಗ್‌ಬಾಸ್‌ನಿಂದ ಒಬ್ಬರು ಅತೀ ಹೆಚ್ಚು ಮತ ಗಳಿಸಿದವರು ಹಾಗು ಇನ್ನೊಬ್ಬರು ಅತಿ ಕಡಿಮೆ ಮತ ಗಳಿಸಿದ ಸ್ಪರ್ಧಿ ಮನೆಯಿಂದ ಹೊರಹೋಗಲಿದ್ದಾರೆ ಅನ್ನೋದನ್ನು ಸುದೀಪ್‌ ತಿಳಿಸಿದರು. ಆದ್ರೆ ಈ ವಿಷ್ಯ ಯಾವುದೂ ಮನೆಯೊಳಗಿರುವ ಸ್ಪರ್ಧಿಗಳಿಗೆ ಗೊತ್ತಿಲ್ಲ.

ಆದರೆ ಮನೆಯಿಂದ ಹೊರಬಂದಿರುವ ಪ್ರಥಮ್‌-ಮಾಳವಿಕ ಸೀಕ್ರೆಟ್ ರೂಮ್ನಲ್ಲಿದ್ದುಕೊಂಡು ತಮ್ಮ ಆಟವನ್ನು ಮುಂದುವರಿಸಲಿದ್ದಾರೆ. ಆದರೆ ಕಡಿಮೆ ವೋಟ್ ಸಿಕ್ಕಿರುವ ಮಾಳವಿಕಾ ಉಳಿದುಕೊಳ್ಳುದು ಅನುಮಾನ. ಆದರೆ ಬಿಗ್‌ಬಾಸ್‌ ಮನೆಯಲ್ಲಿ ಪ್ರಥಮ್ ಇಲ್ಲದೆ ಹೇಗೆ ಇರುತ್ತೆ…ಯಾರೆಲ್ಲ ಜಗಳ ಆಡುತ್ತಾರೆ …ಮಾತನಾಡಿಕೊಳ್ಳುತ್ತಾರೆ ಎಂಬುದನ್ನು ನೋಡಲಿಕ್ಕಾಗಿ ಒಂದು ಶಾಕ್ ನೀಡಿರುವ ಸಾಧ್ಯತೆ ಇದೆ. ರವಿವಾರ ಇದು ಸ್ಪಷ್ಟಗೊಳ್ಳಲಿದೆ.

ಮನೆಯಿಂದ ಹೊರಹೋಗುತ್ತಾ ಪ್ರಥಮ್‌ ಸುದೀಪ್‌ರಲ್ಲಿ ತನ್ನ ಮೂರು ಆಸೆಯನ್ನ ಈಡೇರಿಸುವಂತೆ ಕೇಳಿದರು. ಒಂದು ಸುದೀಪ್‌ಗೆ ಕೈಯಾರೆ ಸಿಹಿ ತಿನ್ನಿಸಬೇಕೆನ್ನುವುದು, ಇನ್ನೊಂದು ಸೆಲ್ಫಿ ತೆಗೆದುಕೊಳ್ಳಬೇಕೆಂಬುದು ಇನ್ನು ಮೂರನೆಯದು ಬಿಗ್‌ಬಾಸ್‌ ಯಾರು ಎನ್ನುವುದನ್ನು ಕಣ್ಣಾರೆ ನೋಡಬೇಕು ಎನ್ನುವುದು. ಬರೀ ಇಷ್ಟು ದಿನದಿಂದ ವಾಯ್ಸ್‌ ಮಾತ್ರ ಕೇಳುತ್ತಿದೆ. ಇದೀಗ ಕಣ್ಣಾರೆ ನೋಡಬೇಕು ಎನ್ನುವ ಬೇಡಿಕೆಯನ್ನು ಕಿಚ್ಚನ ಮುಂದಿಟ್ಟಿದ್ದಾರೆ.

ಇದಕ್ಕೆ ಜಾಣ್ಮೆಯಿಂದ ಉತ್ತರಿಸಿದ ಸುದೀಪ್‌ ನನಗೆ ದೇವರನ್ನು ನೋಡಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇದೆ, ದೇವರು ನನ್ನ ಮುಂದೆ ಯಾವಾಗ ಪ್ರತ್ಯಕ್ಷರಾಗುತ್ತಾರೋ ಅಂದು ಬಿಗ್‌ಬಾಸ್‌ನ ದರ್ಶನ ನಿಮಗೆ ಮಾಡಿಸುತ್ತೇನೆ ಎಂದು ಹೇಳಿ ಜಾರಿಕೊಂಡರು.

Comments are closed.