ಮನೋರಂಜನೆ

ಬಿಗ್‌ಬಾಸ್‌ನಲ್ಲಿ ಕೀರ್ತಿ-ಶಾಲಿನಿಗೆ ಕಿಚ್ಚ ಸುದೀಪ್’ನಿಂದ ತರಾಟೆ !

Pinterest LinkedIn Tumblr

ಈ ವಾರದ ಬಿಗ್‌ಬಾಸ್‌ನಲ್ಲಿ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಸುದೀಪ್ ಅವರು ಕೀರ್ತಿ-ಶಾಲಿನಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಕಾಲರ್ ಆಫ್ ದಿ ವೀಕ್’ನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬರು ಕೀರ್ತಿ ಅವರು ಪ್ರಥಮ್’ರನ್ನು ಟಾರ್ಗೆಟ್ ಹಾಗು ಹಿಂಬದಿನಿಂದ ದೂಷಿಸುದರ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅದಕ್ಕೆ ಕೀರ್ತಿ ತಾನು ಆ ರೀತಿ ಹೇಳಿಲ್ಲ ಎಂದು ಸಮರ್ಥನೆ ನೀಡಲು ಮುಂದಾದರು. ಆಗ ಮಧ್ಯ ಪ್ರವೇಶಿಸಿದ ಸುದೀಪ್ , ನೀವು ಹೇಳಿದ್ದು ಅದೇ ರೀತಿ…ಹಿಂದೆ ಕೂಡ ದೇವರ ಮೇಲೆ ಆಣೆ ಹಾಕಿ ಸುಳ್ಳು ಹೇಳಿದ್ದನ್ನು ನೆನಪಿಸಿಕೊಂಡರು. ಬಳಿಕ ಕೀರ್ತಿ ಮತ್ತೆ ಮತ್ತೆ ತನ್ನ ವಾದವನ್ನೇ ಮುಂದುವರಿಸಿದರಾದರು ಅದಕ್ಕೆ ಸುದೀಪ್ ಅವಕಾಶ ಕೊಡಲಿಲ್ಲ.

ಇನ್ನೊಂದೆಡೆ ಶಾಲಿಗೆ ಕ್ಲಾಸ್ ತೆಗೆದುಕೊಂಡ ಸುದೀಪ್, ತಾವು ಫೈನಲ್’ಗೆ ಹೋಗಿದ್ದಿರಿ ಅಂತ ಹೇಳಿದ್ದು ಯಾರು..? ಎಂದು ಕೇಳಿದರು. ಜೊತೆಗೆ ಬಿಗ್‌ಬಾಸ್‌ ಮನೆಯಲ್ಲಿ ಆರಂಭದಿಂದ ಇಲ್ಲಿಯವರೆಗೂ ಪ್ರಥಮ್-ಮಾಳವಿಕಾರನ್ನು ನಾಮಿನೇಟ್ ಮಾಡುತ್ತಲೇ ಬರುತ್ತಿದ್ದು, ಇವರ ಮೇಲೆ ಮನೆ ಮಂದಿಗೆ ಯಾಕೆ ಸಿಟ್ಟು ಎಂಬುದನ್ನು ಕೀರ್ತಿ, ಶಾಲಿನಿ, ಭುವ, ಮೋಹನ್ ಹಾಗು ರೇಖಾರ ಬಳಿ ಅಭಿಪ್ರಾಯ ಕೇಳಿದರು.

Comments are closed.