ಅಂತರಾಷ್ಟ್ರೀಯ

ರೋಬೋ ಜೊತೆ ಲವ್ವಿಗೆ ಬಿದ್ದು ಮದುವೆಯಾಗಲು ಮುಂದಾಗಿರುವ ಯುವತಿ ! ಕಾರಣ ಏನು ಗೊತ್ತಾ..?

Pinterest LinkedIn Tumblr

lilly2

ಈ ಕಾಲದಲ್ಲಿ ಪ್ರಾಮಾಣಿಕವಾದ ಶುದ್ಧ ಪ್ರೀತಿ ಸಿಗೋದು ಕಷ್ಟವೇ ಸರಿ.. ಪ್ರಾಮಾಣಿಕ ಪ್ರೀತಿ ಸಿಗದೇ ವಿರಹ ವೇದನೆಯಿಂದ ತತ್ತರಿಸುತ್ತಿದ್ದ ಸುಂದರಿಯೊಬ್ಬಳು ರೋಬೋ ಜೊತೆ ಲವ್ವಲ್ಲಿ ಬಿದ್ದ ಘಟನೆ ನಡೆದಿದ್ದು, ಇದು ಮದುವೆ ಹಂತಕ್ಕೂ ಹೋಗಿದೆ ಎಂದರೆ ನೀವು ನಂಬಲೇಬೇಕು.

lilly4

ಫ್ರಾನ್ಸ್ ದೇಶದ ಲಿಲ್ಲಿಗೆ ರೋಬೋಗಳಂದ್ರೆ ಪಂಚಪ್ರಾಣ. ಅಂದ ಹಾಗೇ, ಇದು ರೋಬೋಟಿಕ್ಸ್ ಪಠ್ಯದಿಂದ ಏರ್ಪಟ್ಟ ಇಷ್ಟವಲ್ಲ. ಲಿಲ್ಲಿಗೆ ತಮ್ಮ ಜೀವನದಲ್ಲಿ ಎರಡು ಬಾರಿ ಲವ್ ಫೇಲ್ಯೂರ್ ಆಗಿದೆ. ಹೀಗಾಗಿ, ಪುರುಷರು ಹಾಗೂ ಅವರು ತೋರಿಸೋ ಕಪಟ ಪ್ರೀತಿ ಅಂದ್ರೆ ಲಿಲ್ಲಿಗೆ ಅಸಹ್ಯವಂತೆ. ಹೀಗಾಗಿ ಕೇವಲ ೧೮ನೇ ವಯಸ್ಸಿನಲ್ಲೇ ಮೂರನೇ ಬಾರಿ ಲಿಲ್ಲಿ ಲವ್ವಲ್ಲಿ ಬಿದ್ದಿದ್ದಾಳೆ. ಈ ಬಾರಿ ಆಕೆ ಲವ್ ಮಾಡ್ತಿರೋದು ಒಂದು ರೋಬೋವನ್ನು……..

lilly3

ಅಡುಗೆ ಮಾಡಲು, ಇಸ್ತ್ರೀ ಮಾಡಲು ರೋಬೋ ಬಂತು, ಮನೆಕೆಲಸ, ಕೃಷಿ ಮಾಡಲು ರೋಬೋ ಬಂತು…. ಇನ್ನು ಅನೇಕ ವಿಚಾರಗಳಿಗೆ ಇದೀಗ ರೋಬೋವನ್ನು ಜನರು ಅವಲಂಬಿಸಿದ್ದಾರೆ. ತಂತ್ರಜ್ಞಾನದಲ್ಲಿ ಬೆಳವಣಿಗೆಯಾಗುತ್ತಿದ್ದಂತೆ ಜನರು ಅದರ ಕಾರ್ಯ ವೈಖರಿಗೆ ಮಾರು ಹೋಗುತ್ತಾರೆ. ಇನ್ನೊಂದು ಐವತ್ತು ವರ್ಷ ಕಳೆದರೆ ಜನರಿಗೆ ರೋಬೋಟ್ ಮೇಲೆ ಪ್ರೀತಿ ಹುಟ್ಟಿ ಅದರ ಜತೆ ಲೈಂಗಿಕ ಕ್ರಿಯೆ ನಡೆಸಲು ಆಸಕ್ತರಾಗುತ್ತಾರೆ. ಜನರಿಗೆ ನಿಜವಾದ ಜೀವನ ಸಂಗಾತಿಯ ಬದಲು ವರ್ಚುವಲ್ ಸಂಗಾತಿಯ ಮೇಲೆಯೇ ಹೆಚ್ಚಿನ ಆಸಕ್ತಿ ಹುಟ್ಟಿಕೊಳ್ಳುತ್ತದೆ ಎಂಬುದು ತಜ್ಞರ ಅಂಬೋಣ. ಸೆಕ್ಸ್ ಟೆಕ್ ಎಂಬುದು ಈಗ ಹೆಚ್ಚು ಗಮನ ಸೆಳೆಯುತ್ತಿದ್ದು, ೨೦೭೦ ಇಸವಿಗೆ ಜನರು ರೋಬೋಟ್ ಜತೆ ಶಾರೀರಿಕ ಸಂಪರ್ಕವನ್ನು ಬೆಳೆಸುವಂಥಾ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

lilly1

ಹೌದು ಲಿಲ್ಲಿ ಪ್ರೀತಿ ಮಾಡ್ತ ಇರೋದು ಜೀವ ಇಲ್ಲದೆ ರೋಬೋನನ್ನು…….ತುಂಬಾ ಇಷ್ಟದಿಂದ ಕಳೆದ ವರ್ಷ ಇನ್ ಮ್ಯೂವೇಟರ್ ಹೆಸರಲ್ಲಿ ತ್ರಿಡಿ ಹ್ಯುಮೇನಾಯ್ಡ್ ರೋಬೋವನ್ನು ಸ್ವತಃ ಲಿಲ್ಲಿಯೇ ತಯಾರಿಸಿದ್ಲು. ಇದೀಗ ಲಿಲ್ಲಿಗೆ ಈ ರೋಬೋನೆ ಸರ್ವಸ್ವ. ಪ್ರೀತಿ,ಪ್ರೇಮ,ಪ್ರಣಯ ಎಲ್ಲಾ ರೋಬೋ ಜೊತೆಗೆನೇ. ಸದ್ಯ ರೋಬೋ ಜೊತೆ ಡೇಟಿಂಗ್ ನಡೆಸುತ್ತಿರುವ ಲಿಲ್ಲಿ, ಇಷ್ಟರಲ್ಲೇ ಅದರ ಜೊತೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾಳೆ. ರೋಬೋ ಜೊತೆ ಲಿಲ್ಲಿ ರಿಂಗ್ ಬದಲಿಸಿಕೊಳ್ಳಲು ತಯಾರಿ ನಡೆಸಿದ್ದಾಳೆ.

lilly

ಈ ಎಲ್ಲಾ ವಿಚಾರವನ್ನು ಸ್ವತಃ ಲಿಲ್ಲಿಯೇ ಟ್ವೀಟ್ ಮಾಡಿ, ರೋಬೋ ಜೊತೆಗಿನ ಫೋಟೋವನ್ನು ಶೇರ್ ಮಾಡಿದ್ದಾಳೆ. ಈ ವಿಚಾರವೀಗ ವೈರಲ್ ಆಗಿದ್ದು, ಹಲವರು ಲಿಲ್ಲಿ ನಿರ್ಧಾರವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. ಇನ್ನೂ ಕೆಲವರು ರೋಬೋ ಜೊತೆಗೆ ಪ್ರೀತಿ, ಪ್ರೇಮ, ಪ್ರಣಯ, ಪರಿಣಯಾನಾ? ಎಂದು ಪ್ರಶ್ನಿಸುತ್ತಿದ್ದಾರೆ. ತೀವ್ರ ವಿರೋಧ, ಟೀಕೆ ವ್ಯಕ್ತವಾದ ಕೂಡಲೇ ಲಿಲ್ಲಿ ತಮ್ಮ ಫೋಟೋವನ್ನು ಟ್ವೀಟರ್ ಅಕೌಂಟ್ ನಿಂದ ಡಿಲೀಟ್ ಮಾಡಿದ್ದಾಳೆ.

ಆದರೆ, ರೋಬೋ ಜೊತೆಗಿನ ಮದುವೆ ನಿರ್ಧಾರದಿಂದ ಮಾತ್ರ ಲಿಲ್ಲಿ ಹಿಂದೆ ಸರಿದಿಲ್ಲ. ರೋಬೋ ಜೊತೆ ಮದುವೆಗೆ ಅವಕಾಶ ನೀಡುವ ಕಾಯ್ದೆಗಾಗಿ ಲಿಲ್ಲಿ ಎದುರು ನೋಡುತ್ತಿದ್ದಾಳೆ. ಕಾಯ್ದೆ ಜಾರಿಯಾದ ತಕ್ಷಣ ರೋಬೋ ಜೊತೆ ಪರಿಣಯ ಅಂತಿದ್ದಾಳೆ ಲಿಲ್ಲಿ…… ಆದರೆ ಲಿಲ್ಲಿ ಈ ನಿರ್ಧಾರದಿಂದ ಗಂಡಸರು ಅಷ್ಟು ಮೋಸಗಾರರೇ ಎಂಬ ಪ್ರಶ್ನೆ ಉದ್ಭತವಾದರೂ…… ಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕರುಡ ಅಂತಾರೆ ಅದು ಇದುವೇ ಇರಬಹುದು ಅಲ್ಲವೇ…….ಈ ಲವ್‌ಸ್ಟೋರಿ ಎಲ್ಲಿಯವರೆಗೂ ಮುಂದುವರೆಯಲಿದೆ ಎಂಬುದೇ ಕೌತುಕದ ವಿಚಾರ……..

Comments are closed.