ಪ್ರಮುಖ ವರದಿಗಳು

ಸಾರ್ವಜನಿಕ ಶೌಚಾಲಯವನ್ನು ಬಳಸಿದ್ದಕ್ಕೆ 5 ರೂಪಾಯಿಯ ಚೆಕ್ ಕೊಟ್ಟ …!

Pinterest LinkedIn Tumblr

publictoilet-coin

ಮಧುರೈ: ನೋಟುಗಳ ಅಪಮೌಲ್ಯದ ನಂತರ ಜನರು ಚಿಲ್ಲರೆಗಾಗಿ ಪರದಾಡುವ ಪರಿಸ್ಥಿತಿ ಎಲ್ಲೆಡೆ ಕಂಡುಬರುತ್ತಿದೆ. ಇನ್ನೊಂದೆಡೆ ನಗದುರಹಿತ ವಹಿವಾಟಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿರುವ ಸಂದರ್ಭದಲ್ಲಿ ಮಧುರೈ ಮೂಲದ ವ್ಯಕ್ತಿಯೊಬ್ಬರು ಸಾರ್ವಜನಿಕ ಶೌಚಾಲಯವನ್ನು ಬಳಸಿದ್ದಕ್ಕೆ 5 ರೂಪಾಯಿಯನ್ನು ಚೆಕ್ ಮೂಲಕ ಬರೆದುಕೊಟ್ಟ ಹಾಸ್ಯಾಸ್ಪದ ಪ್ರಸಂಗ ನಡೆದಿದೆ.

ಪಬ್ಲಿಕ್ ಟಾಯ್ಲೆಟ್ ಮಧುರೈ, 5 ರೂಪೀಸ್ ಒನ್ಲಿ ಎಂದು ಬರೆದ ಚೆಕ್ ನ್ನು ಫೇಸ್ ಬುಕ್ ನಲ್ಲಿ ಒಬ್ಬರು ಶೇರ್ ಮಾಡಿದ್ದಾರೆ.

ಈ ಚೆಕ್ ನ ನಿಖರತೆ ಬಗ್ಗೆ ತಿಳಿದುಬಂದಿಲ್ಲ. ಆದರೆ ಇದು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅನೇಕರ ಗಮನ ಸೆಳೆದಿದೆ. ಹಲವರು ಶೇರ್ ಮಾಡಿ ಕಮೆಂಟ್ ಮಾಡಿದ್ದಾರೆ.ಚೆಕ್ ಕ್ಲಿಯರ್ ಆದ ಮೇಲೆ ನಿಮಗೆ ಸೇವೆ ನೀಡಲಾಗುವುದು ಎಂದು ಒಬ್ಬರು ಬರೆದರೆ, ಮತ್ತೊಬ್ಬರು ಮೋದಿಗೆ ಪೆಟಿಎಂನಲ್ಲಿ ಹಣ ಪಾವತಿಸಿ ಎಂದು ಕಮೆಂಟ್ ಮಾಡಿದ್ದಾರೆ.

Comments are closed.