ಅಂತರಾಷ್ಟ್ರೀಯ

ಅಮೆರಿಕದ ನೂತನ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆ; ಹಿಲರಿ ಕ್ಲಿಂಟನ್ ವಿರುದ್ಧ ಜಯ

Pinterest LinkedIn Tumblr

trump1

ವಾಷಿಂಗ್ಟನ್:ವಿಶ್ವದ ದೊಡ್ಡಣ್ಣ ಎಂದೇ ಪ್ರಸಿದ್ಧಿಯಾಗಿರುವ ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆ ನಡೆದ ಜಿದ್ದಾಜಿದ್ದಿನ ಚುನಾವಣೆಯ ಫಲಿತಾಂಶಬುಧವಾರ ಮಧ್ಯಾಹ್ನ ಹೊರ ಬಿದ್ದಿದ್ದು , ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ.

ಡೊನಾಲ್ಡ್ ಟ್ರಂಫ್ ಅವರು 276 ಮತಗಳನ್ನು ಪಡೆದು ಜಯ ಸಾಧಿಸಿ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ . ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ 218 ಮತ ಪಡೆದು ಸೋಲನ್ನನುಭವಿಸಿದ್ದಾರೆ.

ಚುನಾವಣೆಯಲ್ಲಿ ಗೆಲ್ಲಲು 270 ಇಲೆಕ್ಟೋರಲ್ ಕಾಲೇಜು ಮತಗಳ ಅಗತ್ಯವಿತ್ತು. ಒಟ್ಟು 276 ಇಲೆಕ್ಟೋರಲ್ ಕಾಲೇಜು ಮತಗಳನ್ನು ಪಡೆದಿರುವ 70 ವರ್ಷದ ಟ್ರಂಪ್ ಜಯ ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಅಮೆರಿಕದ 45ನೆ ಅಧ್ಯಕ್ಷರಾಗಿ ಟ್ರಂಪ್ ಆಯ್ಕೆಯಾಗಿದ್ದಾರೆ. ಭಾರತೀಯ ಕಾಲಮಾನ ಮಂಗಳವಾರ ರಾತ್ರಿಯಿಂದ ಅಮೆರಿಕದಾದ್ಯಂತ ಅಧ್ಯಕ್ಷೀಯ ಚುನಾವಣೆ ಆರಂಭವಾಗಿದ್ದು, ಬುಧವಾರ ಬೆಳಗ್ಗೆಯೂ ಮತದಾನ ಮುಂದುವರಿದಿತ್ತು.

ಅಮೆರಿಕದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ 20 ಕೋಟಿ ಜನರು ಮತದಾನದ ಅರ್ಹತೆ ಪಡೆದಿದ್ದರು. ಅಮೆರಿಕದ 240 ವರ್ಷಗಳ ಇತಿಹಾಸದಲ್ಲಿ ಅಧ್ಯಕ್ಷ ಹುದ್ದೆ ಇದೇ ಮೊದಲ ಬಾರಿಗೆ ಮಹಿಳೆಗೆ ಒಲಿಯಲಿದೆಯೇ? ಅಥವಾ ಶತಕೋಟ್ಯಧೀಶ ಉದ್ಯಮಿಗೆ ಒಲಿಯಲಿದೆಯೇ? ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿತ್ತು.

ಒಹಿಯೊ, ಫ್ಲೋರಿಡಾ ಹಾಗೂ ನಾರ್ತ್ ಕ್ಯಾರೊಲಿನಾ ರಾಜ್ಯಗಳಲ್ಲಿನ ಚುನಾವಣೆ ಹೋರಾಟದಲ್ಲಿ ಜಯ ಸಾಧಿಸಿದ್ದ ಟ್ರಂಪ್ 69ರ ಪ್ರಾಯದ ಹಿಲರಿ ವಿರುದ್ಧ ಸ್ಪಷ್ಟ ಮೇಲುಗೈ ಸಾಧಿಸಿದ್ದರು.

 ಈ ಬಾರಿಯ ಅಮೆರಿಕದ ಚುನಾವಣೆಯಲ್ಲಿ ಕೃಷ್ಣಮೂರ್ತಿ ಯುಎಸ್ ಕಾಂಗ್ರೆಸ್‌ಗೆ ಆಯ್ಕೆಯಾದ ಮೊದಲ ಭಾರತೀಯ ಸಂಜಾತನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

 ಇಲಿನಾಯ್ಸನಿಂದ ಇದೇ ಮೊದಲ ಬಾರಿ ಯುಎಸ್ ಕಾಂಗ್ರೆಸ್‌ಗೆ ಕೃಷ್ಣಮೂರ್ತಿ ಚುನಾಯಿತರಾಗಿದ್ದಾರೆ. ಹೊಸದಿಲ್ಲಿಯಲ್ಲಿ ಜನಿಸಿರುವ ಕೃಷ್ಣಮೂರ್ತಿ ಮೂರರ ಹರೆಯದಲ್ಲಿ ಹೆತ್ತವರೊಂದಿಗೆ ಅಮೆರಿಕಕ್ಕೆ ಬಂದಿದ್ದರು. ಅಮೆರಿಕದಲ್ಲಿ ಶಾಲಾ ಶಿಕ್ಷಣ ಪಡೆದಿದ್ದ ಕೃಷ್ಣಮೂರ್ತಿ ಅಲ್ಲಿಯೇ ಮೆಕಾನಿಕಲ್ ಎಂಜಿನಿಯರಿಂಗ್ ಅಧ್ಯಯನ ನಡೆಸಿದ್ದರು.

Comments are closed.