ಅಂತರಾಷ್ಟ್ರೀಯ

ಅಮೆರಿಕ ಸೆನೆಟ್‍ಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಆಯ್ಕೆ

Pinterest LinkedIn Tumblr

kamala-harris

ನ್ಯೂಯಾರ್ಕ್: ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್‌, ಭಾರತ ಮೂಲದ ಕಮಲಾ ಹ್ಯಾರಿಸ್‌ ಅವರು ಅಮೆರಿಕದ ಸೆನೆಟ್‌ಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ಅಮೆರಿಕ ಸೆನೆಟ್‍ ಪ್ರವೇಶಿಸಿದ ಭಾರತ ಮೂಲದ ಮೊದಲ ಸೆನೆಟರ್‌ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾಗಿದ್ದಾರೆ.

ಕ್ಯಾಲಿಫೋರ್ನಿಯಾದಿಂದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 51ರ ಹರೆಯದ ಕಮಲಾ, ಲೊರೆಟ್ಟಾ ಸಾಂಕೆಜ್‌ ಅವರನ್ನು ಪರಾಭವಗೊಳಿಸಿದ್ದಾರೆ.

ಕಮಲಾ ಅವರು ಕ್ಯಾಲಿಫೋರ್ನಿಯಾದ ಓಕ್ಲೆಂಡ್‌ನಲ್ಲಿ ಜನಿಸಿದವರು. ಚೆನ್ನೈ ಮೂಲದವರಾದ ಅವರ ತಾಯಿ 1960ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕಮಲಾ ಅವರ ತಂದೆ ಜಮೈಕಾ ಮೂಲದ ಅಮೆರಿಕನ್ ಪ್ರಜೆ.

Comments are closed.