ಪ್ರಮುಖ ವರದಿಗಳು

ದೇವಸ್ಥಾನದಲ್ಲಿ ನಿಖಾ ಆದ ಮುಸ್ಲಿಂ ಜೋಡಿ !

Pinterest LinkedIn Tumblr

marrage

ಬಿಹಾರ: ಧಾರ್ಮಿಕ ಅಸಹಿಷ್ಣುತೆ ಹೆಸರಲ್ಲಿ ಸಾಮರಸ್ಯ ಮರೆಯಾಗುತ್ತಿರುವ ಸಂದರ್ಭದಲ್ಲಿ ಮುಸ್ಲಿಂ ಜೋಡಿಯೊಂದು ಶಿವ ದೇವಾಲಯದಲ್ಲಿ ಮದುವೆಯಾಗುವ ಮೂಲಕ ಭಾವೈಕ್ಯತೆಯ ಸಂದೇಶ ಸಾರಿದೆ.

ಬಿಹಾರದ 25 ವರ್ಷದ ಮೊಹಮ್ಮದ್ ಸೋಹನ್ ಮತ್ತು 20 ವರ್ಷದ ನುರೇಶಾ ಖಾತುನ್ಗೆ ಹಿರಿಯರು ಊರಿನ ಶಿವ ದೇವಾಲಯದಲ್ಲಿ ಮದುವೆ ಮಾಡಿದ್ದಾರೆ. ಭೀಮ್ ನಗರ್‌ನಲ್ಲಿರುವ ದೇವಸ್ಥಾನದಲ್ಲಿ ಇವರ ನಿಖಾ ನೆರವೇರಿದೆ. ಸಮುದಾಯಗಳ ನಡುವೆ ವೈಷಮ್ಯ ಬಿತ್ತುತ್ತಿರುವವರಿಗೆ ಕಠಿಣ ಸಂದೇಶ ನೀಡುವ ನಿಟ್ಟಿನಲ್ಲಿ ಶಿವ ದೇವಾಲಯದ ವರಾಂಡಾದಲ್ಲೇ ಮುಸ್ಲಿಂ ಜೋಡಿಗೆ ಮದುವೆ ಮಾಡಿರೋದಾಗಿ ಆಯೋಜಕರು ತಿಳಿಸಿದ್ದಾರೆ. ಈ ಮದುವೆಗೆ ಗ್ರಾಮಸ್ಥರೆಲ್ಲರ ಸಮ್ಮತಿ ಇತ್ತು ಅನ್ನೋದು ವಿಶೇಷ.

Comments are closed.