ಪ್ರಮುಖ ವರದಿಗಳು

ಈತ ವಂಚನೆ ಮಾಡಿದ ಹಣದಲ್ಲಿ ಗೆಳತಿಯ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ ಏನು ಗೊತ್ತಾ..? ಇದನ್ನು ಕೇಳಿದರೆ ನೀವು ಆಶ್ಚರ್ಯ ಪಡಬಹುದು …

Pinterest LinkedIn Tumblr

sagar

ಮುಂಬೈ: ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಅಮೆರಿಕದ ಸಾವಿರಾರು ನಾಗರಿಕರನ್ನು ವಂಚಿಸಿದ ಥಾಣೆ ಕಾಲ್ಸೆಂಟರ್ ಪ್ರಕರಣದ ಪ್ರಮುಖ ಆರೋಪಿ ಸಾಗರ್ ಥಕ್ಕರ್ ಅಲಿಯಾಸ್ ಶಗ್ಗಿ, ಅಕ್ರಮ ಸಂಪಾದನೆಯಲ್ಲಿ ಗೆಳತಿಯ ಹುಟ್ಟುಹಬ್ಬಕ್ಕೆ 2.5 ಕೋಟಿ ರೂ. ಮೊತ್ತದ ಆಡಿ ಆರ್-8 ಕಾರನ್ನು ಉಡುಗೊರೆಯಾಗಿ ನೀಡಿದ್ದ! ಜತೆಗೆ ದುಬೈನಲ್ಲಿ ಸ್ವಂತ ಉದ್ಯಮವನ್ನೂ ಸ್ಥಾಪಿಸಿದ್ದ.

ಥಾಣೆ ಕಾಲ್ಸೆಂಟರ್ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹಲವು ಮಾಹಿತಿ ಗಳನ್ನು ಹೊರಗೆಡವಿದ್ದಾರೆ. ಆರೋಪಿ ಸಾಗರ್, ಐಷಾರಾಮಿ ಜೀವನ ನಡೆಸುತ್ತಿದ್ದ. ತಾನು ಗೆಳತಿಗೆ ದುಬಾರಿ ಉಡುಗೊರೆಗಳನ್ನು ನೀಡಿರುವ ಬಗ್ಗೆ ಸ್ನೇಹಿತರಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಸಾಗರ್ನ ಗೆಳತಿ ಯಾರು? ಆಕೆ ಎಲ್ಲಿ ವಾಸವಾಗಿದ್ದಾಳೆ ಎಂಬ ಬಗ್ಗೆ ಈಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹತ್ತಾರು ಬಗೆಯ ದುಬಾರಿ ಕಾರುಗಳನ್ನು ಸಾಗರ್ ಖರೀದಿಸಿದ್ದ. ಇವುಗಳನ್ನು ವಶಕ್ಕೆ ಪಡೆಯಲಾಗಿದ್ದು, ಈತ ಗೆಳತಿಗೆ ನೀಡಿದ ಕಾರನ್ನೂ ಪತ್ತೆಹಚ್ಚಿ ಜಪ್ತಿ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲ್ಸೆಂಟರ್ನ 700ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿರುವ ಆರೋಪಿ ಸಾಗರ್ಗಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಥಾಣೆಗೆ ಎಫ್ಬಿಐ: ಕಾಲ್ಸೆಂಟರ್ನಿಂದ ಅಮೆರಿಕದ ಸಾವಿರಾರು ಪ್ರಜೆಗಳು ಮೋಸ ಹೋಗಿರುವ ಕಾರಣ ಪ್ರಕರಣದ ತನಿಖೆ ನಡೆಸಲು ಅಮೆರಿಕದ ಎಫ್ಬಿಐ ಅಧಿಕಾರಿಗಳು ಥಾಣೆಗೆ ಆಗಮಿಸಿದ್ದಾರೆ.

ಕಾಲ್ಸೆಂಟರ್ ಉದ್ಯೋಗಿಗಳು ಅಮೆರಿಕ ನಿವಾಸಿಗಳಿಗೆ ಕರೆ ಮಾಡಿ, ‘ನೀವು ತೆರಿಗೆ ಬಾಕಿದಾರರಾಗಿದ್ದೀರಿ. ತಕ್ಷಣ ಹಣ ಪಾವತಿಸದಿದ್ದರೆ ಮನೆ ಮೇಲೆ ದಾಳಿ ನಡೆಸಲಾಗುವುದು. ಅಪಾರ ಮೊತ್ತದ ದಂಡ ವಿಧಿಸಲಾಗುವುದು’ ಎಂದು ಬೆದರಿಸುತ್ತಿದ್ದರು. ಬಹುತೇಕರು ಹತ್ತಾರು ಸಾವಿರ ಡಾಲರ್ಗಳನ್ನು ಪಾವತಿಸಿದ್ದರು. ವ್ಯಕ್ತಿಗಳ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳ ವಿವರ, ಪಾಸ್ವರ್ಡ್ಗಳನ್ನು ಪಡೆಯಲಾಗುತ್ತಿತ್ತು. ಇದನ್ನು ಮುಂಬೈ ಹಾಗೂ ಅಹಮದಾಬಾದ್ನಲ್ಲಿರುವ ಕಚೇರಿಗೆ ಕಳಿಸಲಾಗುತ್ತಿತ್ತು. ಅಲ್ಲಿಂದ ಮತ್ತೆ ಅಮೆರಿಕದ ವ್ಯಕ್ತಿಯೊಬ್ಬರಿಗೆ ಈ ಮಾಹಿತಿ ನೀಡಲಾಗುತ್ತಿತ್ತು. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ಗಳಿಂದ ಅಮೆರಿಕದಲ್ಲಿ ಹಣ ವಿತ್ಡ್ರಾ ಮಾಡಲಾಗುತ್ತಿತ್ತು. ಕಾಲ್ಸೆಂಟರ್ನ ಮಾಜಿ ಉದ್ಯೋಗಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದ ಎನ್ನಲಾಗಿದೆ. ಅಮೆರಿಕದ 6,500 ಜನರು ವಂಚನೆಗೆ ಒಳಗಾಗಿದ್ದು, ಸುಮಾರು 500 ಕೋಟಿ ರೂ. ಹಗರಣ ಇದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾಲ್ಸೆಂಟರ್ನ ಸುಮಾರು 700 ಉದ್ಯೋಗಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಇವರಲ್ಲಿ 72 ಜನರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು ಎನ್ನಲಾಗಿದ್ದು, ನ್ಯಾಯಾಲಯ ಇವರನ್ನು ರಿಮಾಂಡ್ಹೋಮ್ೆ ಕಳಿಸಿದೆ. ವಂಚನೆ ನಡೆಯುತ್ತಿರುವುದು ಕಾಲ್ಸೆಂಟರ್ನ ಬಹುತೇಕ ಎಲ್ಲ ಉದ್ಯೋಗಿಗಳಿಗೆ ತಿಳಿದಿತ್ತು ಎನ್ನಲಾಗಿದೆ

Comments are closed.