ಕರ್ನಾಟಕ

ಸಿದ್ದರಾಮಯ್ಯರನ್ನು ಅಪಹರಿಸಲು ಪ್ಲಾನ್ ಮಾಡಿದ್ದ ವೀರಪ್ಪನ್ ! ಮುಂದೆ ಏನಾಯಿತು…? ಈ ವಿಷಯ ಹೇಳಿದ್ದು ಯಾರು..?

Pinterest LinkedIn Tumblr

siddu-e1472466233404

ಮೈಸೂರು: ದಂತಚೋರ ವೀರಪ್ಪನ್‌ 1999ರಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನೂ ಅಪಹರಿಸಲು ಯತ್ನಿಸಿದ್ದನಂತೆ! ಈ ವಿಷಯವನ್ನು ಖುದ್ದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.

ಮೈಸೂರಿನ ಮಾಧ್ಯಮ ಪ್ರತಿನಿಧಿಗಳ ಜೊತೆ ಸೋಮವಾರ ಅನೌಪಚಾರಿಕವಾಗಿ ಮಾತನಾಡಿದ ಅವರು, ‘‘1999ರ ಲೋಕಸಭಾ ಚುನಾವಣೆ ವೇಳೆ ಚಾಮರಾಜನಗರ ಮೀಸಲು ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರ ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿ ಸುತ್ತಮುತ್ತ ಪ್ರಚಾರಕ್ಕೆ ಹೋಗಿದ್ದೆ. ಆಗಲೇ ರಾತ್ರಿಯಾಗಿತ್ತು. ಪೊಲೀಸರು ಬಂದು, ವೀರಪ್ಪನ್‌ ತಮ್ಮ ಅಪಹರಣಕ್ಕೆ ಹೊಂಚು ಹಾಕಿ ಕುಳಿತಿರುವ ಮಾಹಿತಿ ಬಂದಿದೆ. ಹೀಗಾಗಿ ಈಗಲೇ ಸ್ಥಳಬಿಟ್ಟು ಹೋಗುವಂತೆ ಸೂಚಿಸಿದರು. ಜತೆಗೆ 2 ಕೆಎಸ್‌ಆರ್‌ಪಿ ವ್ಯಾನ್‌ಗಳಲ್ಲಿದ್ದ ಪೊಲೀಸರ ಭದ್ರತೆಯೊಂದಿಗೆ ಕಳುಹಿಸಿಕೊಟ್ಟರು. ಬಳಿಕ ನಾನು ಆ ಕಡೆ ಸುಳಿಯಲೇ ಇಲ್ಲ. ಹೋದರೂ ಸಂಜೆ ವೇಳೆ ಹೋಗುತ್ತಿರಲಿಲ್ಲ” ಎಂದು ಮುಗುಳ್ನಕ್ಕರು.

ವೀರಪ್ಪನ್‌ 2004ರ ಅ.18 ರಂದು ದಸರಾ ಸಂದರ್ಭದಲ್ಲಿ ತಮಿಳುನಾಡಿನ ಪಾಪರಪಟ್ಟಿಎಂಬಲ್ಲಿ ತಮಿಳುನಾಡು ವಿಶೇಷ ಪಡೆಯ ಕಾರ್ಯಾಚರಣೆ ವೇಳೆ ಹತನಾದ. ಇದಾದ 12 ವರ್ಷಗಳ ನಂತರ ಸಿದ್ದ ರಾಮಯ್ಯಅವರು ವೀರಪ್ಪನ್‌ನನ್ನು ನೆನಪಿಸಿಕೊಂಡಿರುವುದು ಹಾಗೂ 17 ವರ್ಷಗಳ ನಂತರ ತಮ್ಮ ಅಪಹರಣ ಯತ್ನದ ವಿಷಯವನ್ನು ಬಹಿರಂಗಪಡಿಸಿರುವುದು ವಿಶೇಷ.

Comments are closed.