ಪ್ರಮುಖ ವರದಿಗಳು

ಈಕೆ ಪರೀಕ್ಷೆಯನ್ನೇ ಬರೆಯದೆ ರಾಜ್ಯಕ್ಕೆ ಟಾಪರ್ ಆದಳು….ಆಘಾತಕಾರಿ ಸತ್ಯ ತಿಳಿಯಬೇಕೇ ಮುಂದೆ ಓದಿ…

Pinterest LinkedIn Tumblr

rubi-rai-bihar-topper

ಪಾಟ್ಣಾ: 2016ರ ಬಿಹಾರ್ ಬೋರ್ಡ್ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಟಾಪರ್ ಆಗಿದ್ದ ರೂಬಿ ರಾಯ್ ವಾಸ್ತವವಾಗಿ ಪರೀಕ್ಷೆಯನ್ನೇ ಬರೆದಿರಲಿಲ್ಲ ಎಂಬ ಆಘಾತಕಾರಿ ಸತ್ಯ ಹೊರ ಬಿದ್ದಿದೆ.

6 ವಿಷಯಗಳ ಪರೀಕ್ಷೆಯಲ್ಲಿ ರೂಬಿ ಬರೆದಿದ್ದು ಒಂದೇ ಒಂದು ಪರೀಕ್ಷೆ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಿಂದ ತಿಳಿದು ಬಂದಿದೆ.

6 ಪತ್ರಿಕೆಗಳಲ್ಲಿ 5 ಪತ್ರಿಕೆಗಳಲ್ಲಿರುವುದು ರೂಬಿ ಕೈಬಹರವಲ್ಲ . ಅದು ಪರಿಣಿತರ ಕೈ ಬರಹ. ಕೆಲ ಉತ್ತರ ಪತ್ರಿಕೆಗಳು ಬಿಹಾರ್ ಪರೀಕ್ಷಾ ಮಂಡಳಿಯ ಚಿಹ್ನೆ ಕೂಡ ಹೊಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಮೇ ತಿಂಗಳಲ್ಲಿ ನಡೆದ 12ನೇ ತರಗತಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರೂಬಿ ರಾಯ್ ಪ್ರಥಮ ಸ್ಥಾನ ಗಿಸಿದ್ದಳು. ಈ ಹಿನ್ನೆಲೆಯಲ್ಲಿ ಮಾಧ್ಯಮದವರು ಆಕೆಯನ್ನು ಸಂದರ್ಶಿಸಿದಾಗ ಆಕೆ ಪೊಲಿಟಿಕಲ್ ಸೈನ್ಸ್ ಎಂಬುದನ್ನು ಉಚ್ಛರಿಸಲು “prodigal science” ಎಂದಿದ್ದಳು. ಜತೆಗೆ ಇದು ಅಡುಗೆಗೆ ಸಂಬಂಧಿಸಿದ ವಿಷಯ ಎಂದು ಹೇಳುವುದರ ಮೂಲಕ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿದೆ ಎನ್ನುವುದಕ್ಕೆ ಸಾಕ್ಷಿ ಎನಿಸಿದ್ದಳು.

ತನಿಖೆಯ ಬಳಿಕ ಬಿಹಾರ್ ಶಾಲಾ ಪರೀಕ್ಷಾ ಮಂಡಳಿ ರೂಬಿ ಮತ್ತು ಇತರ ಮೂವರು ಟಾಪರ್‌ಗಳ ಫಲಿತಾಂಶವನ್ನು ರದ್ದುಗೊಳಿಸಿತ್ತು. ಜತೆಗೆ ರೂಬಿ ಸೇರಿದಂತೆ ಹಲವರ ಬಂಧನವೂ ಆಗಿತ್ತು.

Comments are closed.