ಪ್ರಮುಖ ವರದಿಗಳು

ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ !

Pinterest LinkedIn Tumblr

radhika

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಈಗ ಸುದ್ದಿಯಲ್ಲಿದ್ದಾರೆ. ಕುಮಾರಸ್ವಾಮಿಯವರನ್ನು ಬಿಟ್ಟು ಮತ್ತೆ ಅವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಫೇಸ್ಬುಕ್ನಲ್ಲಿ ರಾಧಿಕಾ ಬಗ್ಗೆ ಇಂತಹದೊಂದು ಸುದ್ದಿಗಳು ಹರಿದಾಡುತ್ತಿವೆ. ಸ್ನೇಹಿತ ವಿವೇಕ್ ರಾಜ್ ಜೊತೆ ಮದುವೆಯಾಗಿದ್ದಾರಂತೆ ಎಂಬ ಗಾಸಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಫೇಸ್ಬುಕ್’ನಲ್ಲಿನ ಅವಹೇಳನಕಾರಿ ಬರವಣಿಗೆಗಳಿಗೆ ನಟಿ ರಾಧಿಕಾ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ. ಫೇಸ್ಬುಕ್ನಲ್ಲಿ ಅವಹೇಳನ ಬರವಣಿಗೆ ಬರೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರ ರಾಧಿಕಾ ಅವರ ಗಮನಕ್ಕೆ ಬಂದ ಕೂಡಲೆ ಸ್ಪಷ್ಟನೆಯನ್ನೂ ನೀಡಿದ್ದು ಇದು ಸುಳ್ಳು ಎಂದಿದ್ದಾರೆ. ಮದುವೆ ವಿಚಾರದ ವದಂತಿಗಳ ಕುರಿತು ಮಾಧ್ಯಮಗಳಿಗೆ ರಾಧಿಕಾ ಸ್ಪಷ್ಟನೆ ನೀಡಿದ್ದು, ನಾನು ಮರು ಮದುವೆಯಾಗಿಲ್ಲ ಎಂದು ವರದಿಯಾಗಿದೆ

ಕಳೆದೊಂದು ವರ್ಷದಿಂದ ಕುಮಾರಸ್ವಾಮಿ ಅವರಿಂದ ದೂರವಾಗಿರುವ ನಟಿ ರಾಧಿಕಾ ಅವರು ಮಂಗಳೂರು ಮೂಲದ ಯುವ ಉದ್ಯಮಿ ವಿವೇಕ್‌ ರೈ ಅವರನ್ನು ಮರುಮದುವೆಯಾಗಿದ್ದಾರೆ ಎನ್ನುವ ಸುದ್ದಿ ,ಫೋಟೋಗಳ ಸಮೇತ ವೈರಲ್‌ ಆಗಿ ಹರಿದಾಡಿತ್ತು.

Comments are closed.