ರಾಷ್ಟ್ರೀಯ

ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿರುವ ತಮಿಳುನಾಡು ಸಚಿವರ ನಿಯೋಗ

Pinterest LinkedIn Tumblr

modi1

ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಮತ್ತೆ ತಮಿಳುನಾಡು ಕ್ಯಾತೆ ತೆಗೆದಿದೆ. ನಿರ್ವಹಣಾ ಮಂಡಳಿ ರಚನೆ ಕುರಿತಾಗಿ ಕೇಂದ್ರ ಸಲ್ಲಿಸಿರುವ ಅಫಿಡವಿಟ್‍ಗೆ ತಮಿಳುನಾಡು ವಿರೋಧಿಸುತ್ತಿದೆ. ಹೀಗಾಗಿ ಇಂದು ಕಂದಾಯ ಸಚಿವ ಉದಯ್ ಕುಮಾರ್ ನೇತೃತ್ವದ ನಿಯೋಗ ಪ್ರಧಾನಿ ಮೋದಿಯನ್ನು ಭೇಟಿ ಮಾಡಲಿದ್ದಾರೆ.

ಉದಯ್ ಕುಮರ್ ನೇತೃತ್ವದ ನಿಯೋಗದ ತಮಿಳುನಾಡು ಸಂಸದರು, ಅಫಿಡವಿಟ್ ವಾಪಸ್ ಪಡೆಯುವಂತೆ ಪ್ರಧಾನಿ ಮೇಲೆ ಒತ್ತಡ ಹೇರಲು ಸಜ್ಜಾಗಿದ್ದಾರೆ. ಹೇಗಾದರೂ ಮಾಡಿ ಮಂಡಳಿ ರಚನೆ ಮಾಡಿಸಲು ಪಟ್ಟು ಹಿಡಿಯಲಿದ್ದಾರೆ ಅಂತ ಹೇಳಲಾಗಿದೆ.

ಕಳೆದ 13 ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ತಮಿಳುನಾಡು ಸಿಎಂ ಜಯಲಲಿತಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅಮ್ಮನ ಶುಗರ್ ಲೆವೆಲ್ ಇನ್ನೂ ನಾರ್ಮಲ್ ಆಗಿಲ್ಲವಾದ್ರೂ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸುತ್ತಿದ್ದಾರೆ. ಜಯಾ ಅವರಿಗೆ ನೀಡ್ತಿದ್ದ ಆಂಟಿ ಬಯೋಟಿಕ್‍ಗಳ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಇನ್ಫೆಕ್ಷನ್ ಕಡಿಮೆಯಾದ ಮೇಲೆ ಜಯಾ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡ್ತೀವಿ ಅಂತಿದ್ದಾರೆ ಆಸ್ಪತ್ರೆ ವೈದ್ಯರು.

ಜಯಲಲಿತಾ ಹುಷಾರಾಗಿ ಬರಲಿ ಅಂತಾ ತಮಿಳುನಾಡಲ್ಲಿ ಅಭಿಮಾನಿಗಳು ಪೂಜೆ, ಪುನಸ್ಕಾರ ಹರಕೆಗೆ ಮೊರೆ ಹೋಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆ ಸುತ್ತ ಭದ್ರತೆಯನ್ನ ಹಾಗೇ ಮುಂದುವರಿಸಲಾಗಿದ್ದು, ಅಮ್ಮನ ಅನುಪಸ್ಥಿತಿಯಲ್ಲಿ ಆರು ಸರ್ಕಾರಿ ಅಧಿಕಾರಿಗಳು ಶಶಿಕಲಾ ಹಾಗೂ ಶೀಲಾ ಬಾಲಕೃಷ್ಣನ್ ಸಲಹೆ ಮೇರೆಗೆ ಸರ್ಕಾರವನ್ನ ಮುನ್ನಡೆಸುತ್ತಿದ್ದಾರೆ ಅಂತಾ ಗೊತ್ತಾಗಿದೆ. ಚೆನ್ನೈನ ಅಪೋಲೋ ಆಸ್ಪತ್ರೆಗೆ ಎಐಎಡಿಎಂಕೆ ಹಲವು ನಾಯಕರು, ತಮಿಳುನಾಡು ಹಣಕಾಸು ಸಚಿವ ಪನ್ನೀರ್ ಸೆಲ್ವಂ ಭೇಟಿ ನೀಡಿ ಜಯಾ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

Comments are closed.